ADVERTISEMENT

ನೈಋತ್ಯ ಚೀನಾದಲ್ಲಿ 5.0 ತೀವ್ರತೆಯ ಭೂಕಂಪ, ಇಬ್ಬರು ಸಾವು

ಪಿಟಿಐ
Published 19 ಮೇ 2020, 5:35 IST
Last Updated 19 ಮೇ 2020, 5:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕಿಯೊಜಿಯಾ ಕೌಂಟಿಯಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 5.0ಯಷ್ಟು ಇತ್ತು ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.ಭೂಕಂಪದಿಂದಾಗಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಅವಶೇಷಗಳ ಅಡಿಯಲ್ಲಿ ಓರ್ವ ವ್ಯಕ್ತಿ ಸಿಲುಕಿಕೊಂಡಿದ್ದಾನೆ ಎಂದು ಸರ್ಕಾರಿ ಸ್ವಾಮ್ಯದ ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪವಾದ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ಚೀನಾದ ಭೂಕಂಪ ಜಾಲ ಕೇಂದ್ರದ ಪ್ರಕಾರ, ಸೋಮವಾರ ರಾತ್ರಿ 9.47ಕ್ಕೆ ಭೂಕಂಪ ಸಂಭವಿಸಿದೆ.

ADVERTISEMENT

ಭೂಕಂಪದ ಕೇಂದ್ರ ಬಿಂದು ಎಂಟು ಕಿಲೋಮೀಟರ್ ಆಳದಲ್ಲಿತ್ತು ಮತ್ತು ಇದು ಕ್ವಿಜಿಂಗ್ ನಗರದ ಹುಯಿಜ್ ಕೌಂಟಿಯ ಜೊತೆಗೆ ಜಾಟೊಂಗ್, ಕ್ಸುವಾನ್ವೆ ಮತ್ತು ಚುಕ್ಸಿಯಾಂಗ್ ಯಿ ಅಟಾನಮಸ್ ಪ್ರಿಫೆಕ್ಚರ್ ನಗರಗಳಲ್ಲಿ ಕಂಡುಬಂದಿದೆ.

ಕಿಯೋಜಿಯಾ ಕೌಂಟಿ ಸರ್ಕಾರವು ಭೂಕಂಪದ ರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ 16 ಪಟ್ಟಣಗಳಿಗೆ ರಕ್ಷಣಾ ಪಡೆಯನ್ನು ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.