ADVERTISEMENT

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ಕಾಳಗ: ಇಬ್ಬರಿಗೆ ಗಂಭೀರ ಗಾಯ

ಐಎಎನ್ಎಸ್
Published 27 ಮಾರ್ಚ್ 2023, 9:49 IST
Last Updated 27 ಮಾರ್ಚ್ 2023, 9:49 IST
ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ಕಾಳಗ
ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ಕಾಳಗ   

ನ್ಯೂಯಾರ್ಕ್: ಪರಿಚಿತರು ಪರಸ್ಪರ ಗುಂಡಿನ ಕಾಳಗ ಮಾಡಿಕೊಂಡಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕ್ಯಾಲಿಪೋರ್ನಿಯಾ ರಾಜ್ಯದ ಸಕ್ರಾಮಂಟೊದಲ್ಲಿನ ಗುರುದ್ವಾರದಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ 2.35ರ ಸುಮಾರು ಈ ಘಟನೆ ನಡೆದಿದ್ದು, ಒಬ್ಬ ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೆ, ಇನ್ನೊಬ್ಬ ಓಡಿಹೋಗಿದ್ದಾನೆ. ಆತ ಭಾರತೀಯ ಮೂಲದವನಿರಬಹುದು ಎಂದು ಶಂಕಿಸಿದ್ದಾರೆ.

ಗುಂಡಿನ ಕಾಳಗಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ ಇದು ಇಬ್ಬರು ಪರಸ್ಪರ ಪರಿಚಿತರು ವೈಯಕ್ತಿಕ ದ್ವೇಷದಿಂದ ಹೀಗೆ ಮಾಡಿರಬಹುದು. ಈ ವೇಳೆ ಮೂವರಿದ್ದರು ಎಂದು ಸಕ್ರಾಮಂಟೊ ಕೌಂಟಿ ಪೊಲೀಸ್ ಇಲಾಖೆ ವಕ್ತಾರ ಅಮರ್ ಗಾಂಧಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಸಕ್ರಾಮಂಟೊ ಸಿಖ್ ಸಮುದಾಯ ಇದೇ ಗುರುದ್ವಾರದಲ್ಲಿ ಭಾನುವಾರ ನಗರ ಕೀರ್ತನಾ ಪರೇಡ್ ಆಯೋಜನೆ ಮಾಡಿತ್ತು.

ಗುಂಡಿನ ಕಾಳಗವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.