ADVERTISEMENT

ಸಂಘರ್ಷಮಯ ಪರಿಸ್ಥಿತಿ ನಡುವೆಯೇ ತೈವಾನ್‌ ಜಲಸಂಧಿ ಹಾದು ಹೋದ ಅಮೆರಿಕ ಯುದ್ಧನೌಕೆಗಳು

ಏಜೆನ್ಸೀಸ್
Published 28 ಆಗಸ್ಟ್ 2022, 8:36 IST
Last Updated 28 ಆಗಸ್ಟ್ 2022, 8:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ಅಮೆರಿಕದ ಎರಡು ಯುದ್ಧನೌಕೆಗಳು ಭಾನುವಾರ ತೈವಾನ್ ಜಲಸಂಧಿ ಹಾದು ಹೋಗಿವೆ ಎಂದು ಅಮೆರಿಕದ ನೌಕಾಪಡೆ ಹೇಳಿದೆ.

ತೈವಾನ್‌ ಸುತ್ತಲು ಚೀನಾ ಸಮರಾಭ್ಯಾಸ ಕೈಗೊಂಡ ನಂತರ ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧನೌಕೆಗಳು ಜಲಸಂಧಿ ಹಾದಿವೆ.

‘ಮುಕ್ತ, ಶಾಂತಿಯುತ ಇಂಡೋ-ಪೆಸಿಫಿಕ್‌’ ಪ್ರದೇಶದ ನಮ್ಮ ಬದ್ಧತೆಯನ್ನು ಈ ಬೆಳವಣಿಗೆ ಪ್ರತಿಬಿಂಬಿಸಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ADVERTISEMENT

ಅಮೆರಿಕ ಸಂಸತ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈಪೆಗೆ ಭೇಟಿ ನೀಡಿದ ನಂತರ ತೈವಾನ್ ಜಲಸಂಧಿಯಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿತ್ತು. ಹೀಗಿರುವಾಗಲೇ ಯುದ್ಧನೌಕೆಗಳು ಹಾದುಹೋಗಿರುವುದು ಚೀನಾದ ಹುಬ್ಬೇರುವಂತೆ ಮಾಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.