ತೈಪೆ: ಪೂರ್ವ ತೈವಾನ್‌ನಲ್ಲಿ ‘ಚಂತು’ ಚಂಡಮಾರುತ ಪ್ರಭಾವದಿಂದಾಗಿ ಭಾನುವಾರ ಬಿರುಸಿನ ಗಾಳಿ ಮತ್ತು ಮಳೆ ಸುರಿದಿದೆ. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದ್ದು, ಹಲವೆಡೆ ವಿದ್ಯುತ್ ಕಡಿತವೂ ಉಂಟಾಗಿದೆ.
‘ಚಂತು ಚಂಡಮಾರುತವು ತೈವಾನ್‌ನ ಪೂರ್ವ ಕರಾವಳಿಯನ್ನು ಅಪ್ಪಳಿಸಿತು. ಸದ್ಯ ಚಂಡಮಾರುತ ಉತ್ತರಕ್ಕೆ ಚಲಿಸುತ್ತಿದೆ’ ಎಂದು ಅಲ್ಲಿನ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
‘ಚಂಡಮಾರುತದ ಪ್ರಭಾವದಿಂದಾಗಿ ಹುಯ್ಲೆನ್ ಮತ್ತು ಟೈಟುಂಗ್‌ನ ಪೂರ್ವ ಭಾಗದಲ್ಲಿರುವ ಪ್ರದೇಶಗಳಲ್ಲಿ ಈವರೆಗೆ 200 ಮಿ.ಮೀ ಮಳೆಯಾಗಿದೆ. ಪೂರ್ವ ಕರಾವಳಿಯ ಆರ್ಕಿಡ್ ದ್ವೀಪದಲ್ಲಿ 7 ಮೀಟರ್ ಎತ್ತರದ ಅಲೆಗಳು ಎದ್ದಿದ್ದವು’ ಎಂದು ಇಲಾಖೆ ಹೇಳಿದೆ.
‘ಚಂಡಮಾರುತದಿಂದಾಗಿ ಈವರೆಗೆ ಒಟ್ಟು 159 ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.26,000 ಮನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ತೊಡಕು ಉಂಟಾಗಿದೆ’ ಎಂದು ಕೇಂದ್ರೀಯ ತುರ್ತು ಕಾರ್ಯಾಚರಣೆ ಕೇಂದ್ರವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.