ADVERTISEMENT

ಬ್ರಿಟನ್‌: ಅಕ್ರಮ ವಲಸೆ ನಿಯಂತ್ರಣ, ಗಡಿ ಭದ್ರತೆಗೆ ₹1,165 ಕೋಟಿ ಮೀಸಲು

ಪಿಟಿಐ
Published 4 ಆಗಸ್ಟ್ 2025, 14:29 IST
Last Updated 4 ಆಗಸ್ಟ್ 2025, 14:29 IST
   

ಲಂಡನ್‌: ಹೆಚ್ಚುತ್ತಿರುವ ಅಕ್ರಮ ವಲಸೆಯ ನಿಯಂತ್ರಣ ಹಾಗೂ ಗಡಿ ಭದ್ರತೆಗಾಗಿ ₹1,165 ಕೋಟಿಯನ್ನು ವೆಚ್ಚ ಮಾಡುವುದಾಗಿ ಬ್ರಿಟನ್‌ ಸೋಮವಾರ ಘೋಷಿಸಿದೆ.

ರಾಷ್ಟ್ರೀಯ ಅಪರಾಧ ಏಜೆನ್ಸಿಗೆ (ಎನ್‌ಸಿಎ) ಹೆಚ್ಚುವರಿಯಾಗಿ 300 ಅಧಿಕಾರಿಗಳನ್ನು ನೇಮಿಸಿಕೊಳ್ಳುವುದು, ಅತ್ಯಾಧುನಿಕ ಪತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಹಾಗೂ ಮಾನವ ಕಳ್ಳಸಾಗಣೆಯ ಹಿಂದಿರುವ ಕ್ರಿಮಿನಲ್‌ ಸಂಪರ್ಕ ಜಾಲವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಿಸಲು ನೂತನ ಉಪಕರಣಗಳ ಖರೀದಿಗೆ ಈ ಹಣವನ್ನು ಮೀಸಲಾಗಿಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಗಡಿಭದ್ರತಾ ಪಡೆಯ ಕಮಾಂಡೊಗಳು ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ಮಾನವ ಕಳ್ಳಸಾಗಣೆ ಜಾಲದ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ತನಿಖೆಗಳನ್ನು ನಡೆಸಲು ಮತ್ತು ಯೂರೋಪ್‌, ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ, ಅದರಾಚೆಗೂ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.