ADVERTISEMENT

ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಬ್ರಿಟನ್‌ ನ್ಯಾಯಾಲಯ ಒಪ್ಪಿಗೆ

ಪಿಟಿಐ
Published 7 ನವೆಂಬರ್ 2022, 14:26 IST
Last Updated 7 ನವೆಂಬರ್ 2022, 14:26 IST
ಸಂಜಯ್ ಭಂಡಾರಿ
ಸಂಜಯ್ ಭಂಡಾರಿ   

ಲಂಡನ್‌ : ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಶಸ್ತ್ರಾಸ್ತ ವ್ಯವಹಾರಗಳ ಸಲಹೆಗಾರ ಹಾಗೂ ಮಧ್ಯವರ್ತಿ ಸಂಜಯ್ ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ನ ನ್ಯಾಯಾಲಯವೊಂದು ಸೋಮವಾರ ಒಪ್ಪಿಗೆ ನೀಡಿದೆ.

ಈ ವರ್ಷದ ಆರಂಭದಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟೇಟ್‌ ಕೋರ್ಟ್‌ನಲ್ಲಿ ಪ್ರಕರಣ ಆಲಿಸಿದ ಜಿಲ್ಲಾ ನ್ಯಾಯಾಧೀಶ ಮಿಷೆಲ್‌ ಸ್ನೋ, ಈ ವ್ಯಕ್ತಿಯನ್ನು ಹಸ್ತಾಂತರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಆದೇಶ ನೀಡಿದರು. ಸಂಜಯ್‌ ಅವರನ್ನುಭಾರತಕ್ಕೆ ಹಸ್ತಾಂತರ ಕುರಿತಂತೆ ಗೃಹ ಸಚಿವೆ ಸುಯೆಲ್ಲಾ ಬ್ರಾವರ್‌ಮನ್‌ ಅವರ ಅನುಮತಿ ಬೇಕಿದ್ದು, ಅವರಿಗೆ ಪ್ರಕರಣ ವರ್ಗಾಯಿಸುತ್ತಿರುವುದಾಗಿ ಅವರು ತಿಳಿಸಿದರು.

ಸಂಜಯ್ ಅವರನ್ನು ನವದೆಹಲಿಯ ತಿಹಾರ್ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ಇರಿಸಿ ವಿಚಾರಣೆ ಮಾಡುವುದಾಗಿ ಹೇಳಿ ಭಾರತ ಸರ್ಕಾರ ನೀಡಿದ ಭರವಸೆ ಅಡಿಯಲ್ಲಿ ಈ ತೀರ್ಪು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಆರೋಪಗಳನ್ನು ತಳ್ಳಿಹಾಕಿರುವ ಉದ್ಯಮಿ ಸಂಜಯ್‌, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇದೆ.

ಸಂಜಯ್ ವಿರುದ್ಧ 2002ರಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ 2015ರಲ್ಲಿ ಆದಾಯ ತೆರಿಗೆ ವಂಚನೆ ಪ್ರಕರಣ ದಾಖಲಾಗಿದೆ. ಸಂಜಯ್ ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರ ಕೋರಿಕೆಯನ್ನು 2020ರ ಜೂನ್‌ನಲ್ಲಿ ಅಂದಿನ ಗೃಹ ಸಚಿವೆ ಪ್ರೀತಿ ಪಟೇಲ್‌ ಅಂಗೀಕರಿಸಿದ್ದರು ಹಾಗೂ ಹಸ್ತಾಂತರ ವಾರಂಟ್ ಅಡಿಯಲ್ಲಿ ಸಂಜಯ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.