ADVERTISEMENT

ಮೇಲ್ಮನವಿ ಸಲ್ಲಿಸಲು ನೀರವ್‌ ಮೋದಿಗೆ ಅವಕಾಶ

ಭಾರತಕ್ಕೆ ಹಸ್ತಾಂತರ: ಖಿನ್ನತೆ ಆಧಾರದ ಮೇಲೆ ಅರ್ಜಿ ಸಲ್ಲಿಕೆಗೆ ಅನುಮತಿ

ಪಿಟಿಐ
Published 9 ಆಗಸ್ಟ್ 2021, 12:27 IST
Last Updated 9 ಆಗಸ್ಟ್ 2021, 12:27 IST
ನೀರವ್‌ ಮೋದಿ
ನೀರವ್‌ ಮೋದಿ   

ಲಂಡನ್‌: ಭಾರತಕ್ಕೆ ಹಸ್ತಾಂತರಿಸುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಲಂಡನ್‌ ಹೈಕೋರ್ಟ್‌ ಸೋಮವಾರ ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ಅವಕಾಶ ನೀಡಿದೆ.

ಮಾನಸಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಆಧಾರದ ಮೇಲೆ ನ್ಯಾಯಾಲಯ ಈ ಅವಕಾಶ ಕಲ್ಪಿಸಿದೆ.

‘ನೀರವ್‌ ಮೋದಿ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವೇ ಹೆಚ್ಚು’ ಎಂದು ವಕೀಲರು ಮಂಡಿಸಿದ ವಾದವನ್ನು ನ್ಯಾಯಮೂರ್ತಿ ಮಾರ್ಟಿನ್‌ ಚಂಬರ್ಲೈನ್‌ ಪರಿಗಣಿಸಿ ಈ ಆದೇಶ ನೀಡಿದ್ದಾರೆ.

ADVERTISEMENT

ಭಾರತಕ್ಕೆ ಹಸ್ತಾಂತರಿಸುವಂತೆ ಸ್ಥಳೀಯ ಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್‌ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ನ ಹೈಕೋರ್ಟ್‌ ವಜಾಗೊಳಿಸಿದೆ.

ಇದರೊಂದಿಗೆ, ತನ್ನ ಹಸ್ತಾಂತರವನ್ನು ತಡೆಯುವ ಸಲುವಾಗಿ ನಡೆಸಿದ ಮೊದಲ ಪ್ರಯತ್ನದಲ್ಲಿ ನೀರವ್ ಮೋದಿ ವಿಫಲವಾದಂತಾಗಿದೆ.

ಬ್ರಿಟನ್‌ನ ಕಾನೂನಿನಡಿ, ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೌಖಿಕ ಮೇಲ್ಮನವಿ ಸಲ್ಲಿಸಲು ಈಗ ನೀರವ್‌ ಮೋದಿಗೆ ಐದು ದಿನಗಳ ಕಾಲಾವಕಾಶ ಸಿಗಲಿದೆ.

‘ಒಂದು ವೇಳೆ ನೀರವ್‌ ಮೋದಿ ಮೇಲ್ಮನವಿ ಸಲ್ಲಿಸಿದರೆ, ಆ ಅರ್ಜಿಯನ್ನು ಪುರಸ್ಕರಿಸದಂತೆ ಹೈಕೋರ್ಟ್‌ನಲ್ಲಿ ವಾದ ಮಂಡಿಸುವುದಾಗಿ’ ಭಾರತ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ (ಸಿಪಿಎಸ್‌) ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.