ADVERTISEMENT

ಬ್ರಿಟನ್‌: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಿರಿಯ ವೈದ್ಯರ ಮುಷ್ಕರ

ಏಜೆನ್ಸೀಸ್
Published 11 ಏಪ್ರಿಲ್ 2023, 13:01 IST
Last Updated 11 ಏಪ್ರಿಲ್ 2023, 13:01 IST
.
.   

ಲಂಡನ್‌ (ಎಪಿ): ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂಗ್ಲೆಂಡ್‌ನಾದ್ಯಂತ ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ನ (ಎನ್‌ಎಚ್‌ಎಸ್‌) ಸಾವಿರಾರು ಕಿರಿಯ ವೈದ್ಯರು ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಮುಷ್ಕರ ಆರಂಭಿಸಿದ್ದಾರೆ.

ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ಗೆ ಒಳಪಟ್ಟ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಈ ಕಿರಿಯ ವೈದ್ಯರೇ ಬೆನ್ನೆಲುಬು. ಪ್ರಸ್ತುತ, ಎನ್‌ಎಚ್‌ಎಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಪೈಕಿ ಅರ್ಧದಷ್ಟು ಮಂದಿ ಕಿರಿಯ ವೈದ್ಯರೇ ಇದ್ದಾರೆ.

‘ಮುಷ್ಕರದಿಂದಾಗಿ ಈ ಮೊದಲೇ ನಿಗದಿಯಾಗಿದ್ದ 3 ಲಕ್ಷ 50 ಸಾವಿರದಷ್ಟು ಶಸ್ತ್ರಚಿಕಿತ್ಸೆಗಳು ಹಾಗೂ ರೋಗಿಗಳ ಭೇಟಿಯನ್ನು ರದ್ದುಗೊಳಿಸಲಾಗಿದೆ’ ಎಂದು ಎನ್‌ಎಚ್‌ಎಸ್‌ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸದ್ಯ, ತುರ್ತು ಚಿಕಿತ್ಸೆ, ಹೆರಿಗೆ ಸೇವೆಯಂತಹ ಚಿಕಿತ್ಸೆಗಳಿಗೆ ಹಿರಿಯ ವೈದ್ಯರು ಹಾಗೂ ಇತರ ವೈದ್ಯರ ತಂಡಗಳನ್ನು ರಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.