ADVERTISEMENT

ಭಾರತ ಆರ್ಥಿಕತೆಯ ಸೂಪರ್ ಪವರ್: ಬ್ರಿಟನ್ ಸಚಿವ ಗ್ರೆಗ್ 

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 15:05 IST
Last Updated 26 ಅಕ್ಟೋಬರ್ 2022, 15:05 IST
   

ಲಂಡನ್: ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ(ಎಫ್‌ಟಿಎ) ಬಹುಪಾಲು ವಿಭಾಗಗಳನ್ನು ಬ್ರಿಟನ್ ಪೂರ್ಣಗೊಳಿಸಿದೆ. ಆದರೆ, ಅದರಲ್ಲಿರುವ ಅಂಶಗಳು ಪರಸ್ಪರ ಹಿತಾಸಕ್ತಿಗೆ ಸೂಕ್ತವಾಗಿವೆ ಎನಿಸಿದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದು ಬ್ರಿಟನ್ನಿನ ವ್ಯಾಪಾರ ಇಲಾಖೆ ಸಚಿವ ಗ್ರೆಗ್ ಹ್ಯಾಂಡ್ಸ್ ಬುಧವಾರ ಹೇಳಿದ್ದಾರೆ.

ಭಾರತವನ್ನು ಆರ್ಥಿಕತೆಯ ಸೂಪರ್ ಪವರ್ ಎಂದು ಕರೆದಿರುವ ಅವರು, ಎಫ್‌ಟಿಎ ಒಪ್ಪಂದವುಕ್ರಿಯಾಶೀಲಮಾರುಕಟ್ಟೆಗೆ ಪ್ರವೇಶವನ್ನು ಸುಧಾರಿಸುತ್ತದೆ ಎಂದುಹೇಳಿದ್ದಾರೆ.

ಒಪ್ಪಂದ ಕುರಿತ ಹೆಚ್ಚಿನ ಅಧ್ಯಾಯಗಳನ್ನು ನಾವು ಪೂರ್ಣಗೊಳಿಸಿದ್ದೇವೆ ಮತ್ತು ಮುಂದಿನ ಸುತ್ತಿನ ಮಾತುಕತೆಗಳನ್ನು ಶೀಘ್ರದಲ್ಲೇ ಎದುರು ನೋಡುತ್ತಿದ್ದೇವೆ ಎಂದು ಹ್ಯಾಂಡ್ಸ್ ಸಂಸತ್ತಿಗೆ ತಿಳಿಸಿದರು.

ADVERTISEMENT

ನಾವು ಎರಡೂ ಕಡೆಯವರಿಗೆ ಉತ್ತಮ ಎನಿಸುವಂತಹ ಒಪ್ಪಂದದ ಕಡೆಗೆ ಕೆಲಸ ಮಾಡುತ್ತಿದ್ದೇವೆ. ನ್ಯಾಯೋಚಿತ, ಪರಸ್ಪರ ಅನುಕೂಲಕಾರಿ ಮತ್ತು ಅಂತಿಮವಾಗಿ ಬ್ರಿಟಿಷ್ ಜನರು ಹಾಗೂ ಆರ್ಥಿಕ ಹಿತಾಸಕ್ತಿಗೆ ಉತ್ತಮ ಎನಿಸುವಂತಹ ಅಂಶಗಳನ್ನು ಹೊಂದುವವರೆಗೆ ಸಹಿ ಹಾಕುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.