ADVERTISEMENT

ರೂಪಾಂತರ ವೈರಸ್‌: ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್‌ ಘೋಷಿಸಿದ ಪ್ರಧಾನಿ ಬೋರಿಸ್‌

ಏಜೆನ್ಸೀಸ್
Published 5 ಜನವರಿ 2021, 1:29 IST
Last Updated 5 ಜನವರಿ 2021, 1:29 IST
ಬೋರಿಸ್‌ ಜಾನ್ಸನ್
ಬೋರಿಸ್‌ ಜಾನ್ಸನ್   

ಲಂಡನ್‌: ರೂಪಾಂತರಕೊರೊನಾ ವೈರಸ್‌ ವೇಗವಾಗಿ ಹರಡುತ್ತಿರುವುದರಿಂದ ಫೆಬ್ರುವರಿ ಮಧ್ಯಭಾಗದವರೆಗೂ ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಸರ್ಕಾರಿ ಮಾಧ್ಯಮ ದೂರದರ್ಶನದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬುಧವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬಂದ್‌ ಆಗಲಿವೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲುಭಾಗ ಜನರು ಕಠಿಣ ನಿರ್ಬಂಧಗಳ ಅಡಿಯಲ್ಲಿ ಬದುಕುತ್ತಿದ್ದರೂ ಸೋಂಕು ತಡೆಯಲು ಸಾಧ್ಯವಾಗುತ್ತಿಲ್ಲ, ಸೋಮವಾರ ಒಂದೇ ದಿನ 27 ಸಾವಿರ ಜನರಿಗೆ ಸೋಂಕು ತಗಲಿದೆ. ಕಳೆದ ಮಂಗಳವಾರದಿಂದ 80 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.

ADVERTISEMENT

ಕಳೆದ ಏಪ್ರಿಲ್‌ ತಿಂಗಳಿಗೆ ಹೋಲಿಕೆ ಮಾಡಿದರೆ ಸೋಂಕು ಹರಡುವಿಕೆಯ ಪ್ರಮಾಣ ಶೇ 40 ರಷ್ಟು ಹೆಚ್ಚಾಗಿದೆ ಎಂದು ಬೋರಿಸ್‌ ಜಾನ್ಸನ್ ಕಳವಳ ವ್ಯಕ್ತಪಡಿಸಿದರು.

ಲಸಿಕೆಗಳ ಬಳಕೆಯ ನಡುವೆಯೂ ನಾವು ರೂಪಾಂತರ ವೈರಸ್‌ ಹರಡುವಿಕೆಯನ್ನು ತಡೆಯಲು ಹೆಚ್ಚಿನ ಕೆಲಸ ಮಾಡಬೇಕಿದೆ. ಈಗ ದೇಶದಾದ್ಯಂತ ಲಾಕ್‌ಡೌನ್‌ ಮಾಡುತ್ತಿರುವುದು ಅನಿವಾರ್ಯವಾಗಿದೆ ಎಂದು ಅವರು‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.