ADVERTISEMENT

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಐಸಿಯುಗೆ ದಾಖಲು

ರಾಯಿಟರ್ಸ್
Published 7 ಏಪ್ರಿಲ್ 2020, 1:44 IST
Last Updated 7 ಏಪ್ರಿಲ್ 2020, 1:44 IST
ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್   

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಹದಗೆಟ್ಟಿದ್ದು ಸೋಮವಾರ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಡ್ರೌನಿಂಗ್ ಸ್ಟ್ರೀಟ್ ಕಚೇರಿ ತಿಳಿಸಿದೆ.

ವಿಪರೀತ ಜ್ವರಇದ್ದ ಕಾರಣಭಾನುವಾರ ಜಾನ್ಸನ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಾಗಲೇ ಜಾನ್ಸನ್ ಸೆಲ್ಫ್ ಕ್ವಾರಂಟೈನ್‌ನಲ್ಲಿದ್ದು, ಕಳೆದ 10 ದಿನಗಳಿಂದ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು.

ಪ್ರಧಾನಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್‌ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಜಾನ್ಸನ್ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಿದ್ದು,ಆಮ್ಲಜನಕ ನೀಡಲಾಗಿದೆ. ಸೋಮವಾರ ಮಧ್ಯಾಹ್ನ ಪ್ರಧಾನಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ವೈದ್ಯರ ತಂಡದ ಅನುಮತಿಯಂತೆ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಪ್ರಧಾನಿ ಕಚೇರಿಯ ವಕ್ತಾರ ಹೇಳಿದ್ದಾರೆ.

ADVERTISEMENT

ಅಗತ್ಯ ಸಂದರ್ಭಗಳಲ್ಲಿ ತನಗೆ ಸಹಾಯ ಮಾಡುವಂತೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಲ್ಲಿ ಜಾನ್ಸನ್ ಕೇಳಿಕೊಂಡಿದ್ದಾರೆ ಎಂದು ಹೇಳಿದ ಡ್ರೌನಿಂಗ್ ಸ್ಟ್ರೀಟ್, ಪ್ರಧಾನಿ ಪ್ರಜ್ಞಾವಸ್ಥೆಯಲ್ಲೇ ಇದ್ದಾರೆ. ಜಾನ್ಸನ್ ಅವರಿಗೆ ವೆಂಟಿಲೇಷನ್ ಸಹಾಯ ಬೇಕಾಗಿ ಬರಬಹುದು ಎಂಬ ಕಾರಣದಿಂದಲೇ ಐಸಿಯುಗೆ ದಾಖಲಿಸಲಾಗಿದೆ ಎಂದು ಡ್ರೌನಿಂಗ್ ಸ್ಟ್ರೀಟ್ ಹೇಳಿದೆ. ಮಾರ್ಚ್ 26ರಂದು ಜಾನ್ಸನ್ (55) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.