ADVERTISEMENT

ರಷ್ಯಾ ಬೆಂಬಲಿತ ಬಂಡುಕೋರರ ದಾಳಿಗೆ ಉಕ್ರೇನ್‌ ಸೈನಿಕ ಸಾವು

ಏಜೆನ್ಸೀಸ್
Published 19 ಫೆಬ್ರುವರಿ 2022, 8:33 IST
Last Updated 19 ಫೆಬ್ರುವರಿ 2022, 8:33 IST
ಉಕ್ರೇನ್‌ ಸೈನಿಕರ ಸಮರಭ್ಯಾಸದ ಚಿತ್ರ (ರಾಯಿಟರ್ಸ್‌)
ಉಕ್ರೇನ್‌ ಸೈನಿಕರ ಸಮರಭ್ಯಾಸದ ಚಿತ್ರ (ರಾಯಿಟರ್ಸ್‌)   

ಕೀವ್‌: ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳೊಂದಿಗೆ ನಡೆದ ಕಾಳಗದಲ್ಲಿ ತನ್ನ ಕಡೆಯ ಸೈನಿಕನೊಬ್ಬ ಹತನಾಗಿರುವುದಾಗಿ ಉಕ್ರೇನ್‌ ಶನಿವಾರ ತಿಳಿಸಿದೆ.

ರಷ್ಯಾ ಸೇನೆ ಉಕ್ರೇನ್‌ ಮೇಲೆ ದಾಳಿ ನಡೆಸುವ ಭೀತಿ ಇರುವ ನಡುವೆಯೇ ಈ ಘಟನೆಯೂ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಿಯಾಗಿದೆ.

ADVERTISEMENT

‘ಶೆಲ್ ದಾಳಿಯ ಪರಿಣಾಮವಾಗಿ, ಒಬ್ಬ ಉಕ್ರೇನ್‌ ಸೈನಿಕ ಹತನಾಗಿದ್ದೇನೆ’ ಎಂದು ಪೂರ್ವ ಉಕ್ರೇನ್‌ನ ಜಂಟಿ ಮಿಲಿಟರಿ ಕಮಾಂಡ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.