ADVERTISEMENT

ರಷ್ಯಾದ 9 ಯುದ್ಧ ವಿಮಾನಗಳು ನಾಶ: ಉಕ್ರೇನ್‌

ಏಜೆನ್ಸೀಸ್
Published 10 ಆಗಸ್ಟ್ 2022, 14:12 IST
Last Updated 10 ಆಗಸ್ಟ್ 2022, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌: ಉಕ್ರೇನ್ ದಾಳಿಯಿಂದಕ್ರಿಮಿಯಾ ವಾಯುನೆಲೆಯಲ್ಲಿ ರಷ್ಯಾದ9 ಯುದ್ಧ ವಿಮಾನಗಳು ಸ್ಫೋಟಗೊಂಡು ನಾಶವಾಗಿವೆ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

ಆದರೆ ರಷ್ಯಾ ಇದನ್ನು ನಿರಾಕರಿಸಿದೆ. ಯಾವುದೇ ಯುದ್ಧವಿಮಾನಗಳಿಗೆ ಹಾನಿಯಾಗಿಲ್ಲ ಅಥವಾ ಸ್ಥಳದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದು ತಿಳಿಸಿದೆ.

ಸ್ಫೋಟದ ಬಳಿಕ ಮಾತನಾಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಉಕ್ರೇನ್‌ ಮತ್ತು ಯುರೋಪ್ ವಿರುದ್ಧದ ರಷ್ಯಾದ ಯುದ್ಧ ಕ್ರಿಮಿಯಾ ಮೂಲಕ ಆರಂಭವಾಗಿದೆ. ಅದು ಕ್ರಿಮಿಯಾ ಮೂಲಕವೇ ಮುಕ್ತಾಯವಾಗಬೇಕು–ಇದು ಸ್ವಾತಂತ್ರ್ಯ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.