ADVERTISEMENT

ಮಾಸ್ಕೊ ಗುರಿಯಾಗಿಸಿ ಉಕ್ರೇನ್ ಹಾರಿಸಿದ್ದ 60 ಡ್ರೋನ್‌ ಉರುಳಿಸಿದ್ದೇವೆ: ಮೇಯರ್

ಏಜೆನ್ಸೀಸ್
Published 11 ಮಾರ್ಚ್ 2025, 5:10 IST
Last Updated 11 ಮಾರ್ಚ್ 2025, 5:10 IST
<div class="paragraphs"><p>ಮಾಸ್ಕೊ ನಗರದ ಕಟ್ಟಡದ ಬಳಿ ಭದ್ರತಾ ಸಿಬ್ಬಂದಿ ಗಸ್ತಿನಲ್ಲಿರುವುದು </p></div>

ಮಾಸ್ಕೊ ನಗರದ ಕಟ್ಟಡದ ಬಳಿ ಭದ್ರತಾ ಸಿಬ್ಬಂದಿ ಗಸ್ತಿನಲ್ಲಿರುವುದು

   

ಮಾಸ್ಕೊ: ಮಂಗಳವಾರ ಬೆಳಿಗ್ಗೆ ನಡೆದ ಬೃಹತ್ ದಾಳಿಯಲ್ಲಿ ರಷ್ಯಾದ ರಾಜಧಾನಿ ಮಾಸ್ಕೊವನ್ನು ಗುರಿಯಾಗಿಸಿಕೊಂಡು ಹಾರಿಸಿದ್ದ ಕನಿಷ್ಠ 60 ಉಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೊ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಹೇಳಿದ್ದಾರೆ.

ರಷ್ಯಾದ ರಾಜಧಾನಿಯನ್ನು ಸುತ್ತುವರೆದಿರುವ ರಾಮೆನ್‌ಸ್ಕಿ ಮತ್ತು ಡೊಮೊಡೆಡೋವೊ ಜಿಲ್ಲೆಗಳಲ್ಲಿ ಕನಿಷ್ಠ 11 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೋಬ್ಯಾನಿನ್ ಹೇಳಿದ್ದಾರೆ.

ADVERTISEMENT

ಇತರ ಡ್ರೋನ್‌ಗಳನ್ನು ಎಲ್ಲಿ ಹೊಡೆದುರುಳಿಸಲಾಗಿದೆ ಎಂಬುದನ್ನು ಅವರು ನಿರ್ದಿಷ್ಟಪಡಿಸಲಿಲ್ಲ. ಅವು ಮಾಸ್ಕೊ ಕಡೆಗೆ ಹಾರುತ್ತಿದ್ದವು ಎಂದು ಮಾತ್ರ ಅವರು ಹೇಳಿದ್ದಾರೆ.

ಮಾಸ್ಕೊದ ಎರಡು ವಿಮಾನ ನಿಲ್ದಾಣಗಳಾದ ಡೊಮೊಡೆಡೋವೊ ಮತ್ತು ಝುಕೊವ್‌ಸ್ಕಿಯ ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ನಿರ್ಬಂಧಿಸಲಾಗಿದೆ.

ಡ್ರೋನ್ ದಾಳಿಯಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದರೆ, ದಾಳಿಯು ಮಾಸ್ಕೊದ ಕಟ್ಟಡವೊಂದರ ಛಾವಣಿಗೆ ಸಣ್ಣ ಹಾನಿಯನ್ನುಂಟುಮಾಡಿದೆ ಎಂದು ಸೋಬ್ಯಾನಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಲ ತಿಂಗಳುಗಳಿಂದ ಮಾಸ್ಕೊವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳಲ್ಲಿ ಇದು ಅತಿದೊಡ್ಡ ದಾಳಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.