ADVERTISEMENT

ಅಫ್ಗಾನ್‌ನಿಂದ ತೆರವು ಕಾರ್ಯಾಚರಣೆ ಅವಮಾನಕರ: ಇಂಗ್ಲೆಂಡ್ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2021, 13:23 IST
Last Updated 30 ಆಗಸ್ಟ್ 2021, 13:23 IST
ಕಾಬೂಲ್‌ ವಿಮಾನ ನಿಲ್ದಾಣ
ಕಾಬೂಲ್‌ ವಿಮಾನ ನಿಲ್ದಾಣ   

ಲಂಡನ್:‌ ಅಫ್ಗಾನಿಸ್ತಾನದಲ್ಲಿ ಕಳೆದ20 ವರ್ಷಗಳಿಂದ ದೇಶದ ಪರವಾಗಿ ಕೆಲಸ ಮಾಡಿದಸಿಬ್ಬಂದಿ ಮತ್ತು ಅಫ್ಗಾನ್‌ ನಾಗರಿಕರತೆರವು ಕಾರ್ಯಾಚರಣೆಯು ʼಅವಮಾನಕರʼ ಎಂದುಇಂಗ್ಲೆಂಡ್ ಸಂಸದ ಹಾಗೂ ಕನ್ಸರ್ವೇಟಿವ್‌ ಪಕ್ಷದ ನಾಯಕ ತೊಬಿಯಾಸ್‌ ಎಲ್‌ವುಡ್‌ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ಸಂಸತ್ತಿನ ಡಿಫೆನ್ಸ್‌ ಸೆಲೆಕ್ಟ್‌ ಕಮಿಟಿ ಸಭೆಯ ನೇತೃತ್ವ ವಹಿಸಿದ್ದ ತೊಬಿಯಾಸ್‌,ʼ20 ವರ್ಷಗಳ ನಂತರ ನಾವುಹೊರ ಬೀಳುತ್ತಿದ್ದೇವೆ ಮತ್ತು ಹೇಳಿಕೊಳ್ಳುವಂಥದ್ದು ಅಲ್ಪವಷ್ಟೇ.ನಮಗೆ ಕಾರ್ಯತಂತ್ರ, ರಾಜನೀತಿ ಕೊರತೆ ಉಂಟಾಯಿತು. ಅಫ್ಗಾನ್‌ ಬೆಳವಣಿಗೆಯನ್ನು ತಾಳ್ಮೆಯಿಂದ ಗಮನಿಸಬೇಕಿತ್ತು. ಈ ರೀತಿಯಲ್ಲಿ ಹೊರನಡೆತ್ತಿರುವುದು ಅವಮಾನಕರʼ ಎಂದಿರುವುದಾಗಿ ಸ್ಕೈ ನ್ಯೂಸ್‌ ವರದಿ ಮಾಡಿದೆ.

ಮಾಜಿ ಸೈನಿಕನೂ ಆಗಿರುವ ಸಂಸದ, ಅಫ್ಗಾನಿಸ್ತಾನದಿಂದ ಬ್ರಿಟನ್‌ ನಾಗರಿಕರು ಮತ್ತು ಅರ್ಹ ಅಫ್ಗನ್ನರನ್ನು ಕರೆತರುವ ಕಾರ್ಯಾಚರಣೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.ಆದಾಗ್ಯೂ, ಸ್ಥಳಾಂತರಕ್ಕೆ ಅರ್ಹರಾಗಿದ್ದನೂರಾರು ಅಫ್ಗನ್ನರನ್ನುಬಿಟ್ಟು ಹೊರನಡೆದದ್ದಕ್ಕಾಗಿಬ್ರಿಟನ್‌ ಸರ್ಕಾರದವಿರುದ್ಧಟೀಕೆಗಳು ವ್ಯಕ್ತವಾಗಿವೆ.

ADVERTISEMENT

ವಿರೋಧ ಪಕ್ಷವಾದ ಲೇಬರ್‌ ಪಾರ್ಟಿ, ಅಫ್ಗಾನ್‌ ನಿರಾಶ್ರಿತರಿಗೆ ಸಂಬಂಧಿಸಿದ ಸಾವಿರಾರು ಪತ್ರಗಳು ಮತ್ತು ಇ-ಮೇಲ್‌ಗಳನ್ನು ತೆರವು ಕಾರ್ಯಾಚರಣೆಪ್ರಕ್ರಿಯೆಯಲ್ಲಿ ನಿರತವಾಗಿರುವ ವಿದೇಶಾಂಗ ಕಚೇರಿಯ ಅಧಿಕಾರಿಗಳು ತೆರೆದು ಸಹ ನೋಡಿಲ್ಲ ಎಂದು ಕಿಡಿಕಾರಿದೆ.

ಇಂಗ್ಲೆಂಡ್‌ನ ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ತೆರವು ಕಾರ್ಯಾಚರಣೆ ಆರಂಭವಾದ ಆಗಸ್ಟ್‌13ರಿಂದ ಇಲ್ಲಿಯವರೆಗೆ ಬ್ರಿಟನ್‌ ನಾಗರಿಕರು, ಅಫ್ಗನ್‌ ಸಿಬ್ಬಂದಿ ಮತ್ತು ಅವರ ಕುಟುಂಬದವರು ಹಾಗೂಅಪಾಯದಲ್ಲಿದ್ದ ಇತರರು ಸೇರಿ ಒಟ್ಟು15,000 ಪ್ರಜೆಗಳನ್ನು ಕಾಬೂಲ್‌ನಿಂದ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.