ADVERTISEMENT

ಯಸ್‌ ಚಂಡಮಾರುತ: ಭಾರತಕ್ಕೆ ನೆರವು ನೀಡಲು ಸಿದ್ಧ ಎಂದ ವಿಶ್ವಸಂಸ್ಥೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 10:24 IST
Last Updated 27 ಮೇ 2021, 10:24 IST
ವಿಶ್ವಸಂಸ್ಥೆ ಲಾಂಛನ
ವಿಶ್ವಸಂಸ್ಥೆ ಲಾಂಛನ    

ವಿಶ್ವಸಂಸ್ಥೆ (ಪಿಟಿಐ): ಭಾರತವು ಬಯಸಿದರೆ ಯಸ್‌ ಚಂಡಮಾರುತದಿಂದ ತೊಂದರೆಗೆ ಒಳಗಾದವರಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಎಲ್ಲ ರೀತಿಯ ನೆರವು ನೀಡಲು ಸಿದ್ಧವಾಗಿವೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರರು ತಿಳಿಸಿದರು.

’ಯಸ್‌ ಚಂಡಮಾರುತ ಸದ್ಯ ದಕ್ಷಿಣ ಏಷ್ಯಾದಲ್ಲಿ ಭಾರಿ ಪರಿಣಾಮ ಬೀರುತ್ತಿದೆ. ಚಂಡಮಾರುತ ನಿರ್ವಹಣೆ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ವಿಶ್ವಸಂಸ್ಥೆಯ ಅಧಿಕಾರಿಗಳು ಇಂಗಿತ ವ್ಯಕ್ತಪಡಿಸಿದ್ದಾರೆ. ಅಗತ್ಯ ವಸ್ತುಗಳ ದಾಸ್ತಾನು, ಆಹಾರ ಹಾಗೂ ಇತರ ವಸ್ತುಗಳ ವ್ಯವಸ್ಥೆ ಮಾಡಲಿದ್ದಾರೆ‘ ಎಂದು ಗುಟೆರಸ್‌ ವಕ್ತಾರ ಸ್ಟೀಫನ್‌ ದುರ್ಜಾರಿಕ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಭಾರತದ ಒಡಿಶಾದಲ್ಲಿ ಬುಧವಾರ ಚಂಡಮಾರುತವು ಅಪ್ಪಳಿಸಿದ್ದು, ಇದಕ್ಕೂ ಮೊದಲೇ ಸರ್ಕಾರ ಲಕ್ಷಾಂತರ ಮಂದಿಯನ್ನು ಸ್ಥಳಾಂತರಿಸಿದೆ. ಅವರಿಗೆ ನೆರವು ನೀಡಲು ವಿಶ್ವಸಂಸ್ಥೆ ಸಿದ್ಧವಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.