ADVERTISEMENT

ವಿಶ್ವಸಂಸ್ಥೆ: ಭಾರತದ ನಿವಾಸಿ ಸಂಯೋಜಕರಾಗಿ ಶೋಂಬಿ ಶಾರ್ಪ್‌ ನೇಮಕ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 8:23 IST
Last Updated 16 ನವೆಂಬರ್ 2021, 8:23 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ಅಮೆರಿಕದ ಸುಸ್ಥಿರ ಅಭಿವೃದ್ಧಿ ತಜ್ಞರಾಗಿರುವ ಶೋಂಬಿ ಶಾರ್ಪ್‌ ಅವರನ್ನು ವಿಶ್ವಸಂಸ್ಥೆಯು ಭಾರತದಲ್ಲಿ ತನ್ನ ನಿವಾಸಿ ಸಂಯೋಜಕರನ್ನಾಗಿ ನೇಮಕ ಮಾಡಿದೆ.

‘ಶಾರ್ಪ್‌ ಅವರು ಅಂತರರಾಷ್ಟ್ರೀಯವಾಗಿ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ಉತ್ತೇಜನಕ್ಕೆ ತಮ್ಮ ವೃತ್ತಿ ಜೀವನದ 25 ವರ್ಷಗಳನ್ನು ಮೀಸಲಿರಿಸಿದ್ದಾರೆ. ಅವರ ಅಪಾರ ಅನುಭವವು ಅವರ ಹೊಸ ಸ್ಥಾನದ ನಿರ್ವಹಣೆಗೆ ಸಹಕಾರಿಯಾಗಲಿದೆ’ ಎಂದು ವಿಶ್ವಸಂಸ್ಥೆಯು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆತಿಥೇಯ ಸರ್ಕಾರದ ಅನುಮೋದನೆಯೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರೆಸ್‌ ಅವರು ಶೋಂಬಿ ಶಾರ್ಪ್‌ ಅವರನ್ನು ಭಾರತದ ನಿವಾಸಿ ಸಂಯೋಜಕರಾಗಿ ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ADVERTISEMENT

ಇದಕ್ಕೂ ಮೊದಲು ಅವರು ಅರ್ಮೇನಿಯಾದಲ್ಲಿ ವಿಶ್ವಸಂಸ್ಥೆಯ ನಿವಾಸಿ ಸಂಯೋಜಕರಾಗಿದ್ದರು.

‘ಜಾಗತಿಕ ಗುರಿಯನ್ನು ಮುಟ್ಟಲು ಈ ದಶಕದ ಪ್ರಕ್ರಿಯೆಯಲ್ಲಿ ನಾವು, ನೀವು ಮತ್ತು ನಮ್ಮ ತಂಡವು ಒಟ್ಟಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇವೆ. ಈ ದಿಸೆಯಲ್ಲಿ ಭಾರತ ನಮಗೆ ನಿರ್ಣಾಯಕ ಪಾಲುದಾರನಾಗಿದೆ’ ಎಂದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಸಮೂಹ ಟ್ವೀಟ್‌ ಮಾಡಿದೆ.

ಹೊಸ ಸ್ಥಾನ ಅಲಂಕರಿಸಲು ಸೋಮವಾರ ಭಾರತ ತಲುಪಿದ ಶಾರ್ಪ್‌ ಹರ್ಷ್‌ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.