ADVERTISEMENT

ಸುಡಾನ್‌: ಕದನ ವಿರಾಮಕ್ಕೆ ವಿಶ್ವಸಂಸ್ಥೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 15:39 IST
Last Updated 4 ನವೆಂಬರ್ 2025, 15:39 IST
   

ದುಬೈ: ಸುಡಾನ್‌ನಲ್ಲಿನ ಆಂತರಿಕ ಸಂಘರ್ಷ ಶಮನಗೊಳಿಸಲು ತಕ್ಷಣವೇ ಕದನ ವಿರಾಮ ಜಾರಿಗೊಳಿಸಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಮಂಗಳವಾರ ಆಗ್ರಹಿಸಿದ್ದಾರೆ.

ಎಲ್‌ ಫಾಶರ್‌ನ ಡಾರ್ಫರ್‌ ನಗರವನ್ನು ಅರೆಸೈನಿಕ ಪಡೆಗಳು ವಶಪಡಿಸಿಕೊಂಡ ಬೆನ್ನಿಗೆ, ‘ಸುಡಾನ್‌ನಲ್ಲಿನ ಆಂತರಿಕ ಸಂಘರ್ಷವು ಯಾರ ನಿಯಂತ್ರಣಕ್ಕೂ ಸಿಗದಾಗಿದೆ’ ಎಂದಿದ್ದಾರೆ.

ಕತಾರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಮಾತನಾಡಿದ ಗುಟೆರೆಸ್‌, ‘ಗಂಭೀರ ಎಚ್ಚರಿಕೆ ನೀಡಿದ್ದರೂ ಎಲ್‌ ಫಾಶರ್ ವಶಪಡಿಸಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸುಡಾನ್‌ನಲ್ಲಿನ ಆಂತರಿಕ ಸಂಘರ್ಷವು ಎರಡು ವರ್ಷದಿಂದಲೂ ಜಗತ್ತಿನ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಈ ಸಂಘರ್ಷದಲ್ಲಿ ಅಪಾರ ಸಂಖ್ಯೆಯ ನಾಗರಿಕರು ಸಿಲುಕಿಕೊಂಡಿದ್ದು, ತುರ್ತಾಗಿ ಕದನ ವಿರಾಮ ಒಪ್ಪಂದ ಏರ್ಪಡಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.