ADVERTISEMENT

ಹಮಾಸ್‌ ದಾಳಿ ವಿರುದ್ಧ ಬ್ರೆಜಿಲ್‌ ಮಂಡಿಸಿದ ಖಂಡನಾ ಗೊತ್ತುವಳಿ ತಿರಸ್ಕೃತ

ಏಜೆನ್ಸೀಸ್
Published 18 ಅಕ್ಟೋಬರ್ 2023, 16:02 IST
Last Updated 18 ಅಕ್ಟೋಬರ್ 2023, 16:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ರಾಯಿಟರ್ಸ್

ವಿಶ್ವಸಂಸ್ಥೆ: ‘ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ನಡೆಸಿರುವ ಹೇಯ ದಾಳಿ’ಗಳನ್ನು ಖಂಡಿಸುವಂತೆ ಬ್ರೆಜಿಲ್‌ ಮಂಡಿಸಿದ್ದ ಗೊತ್ತುವಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು (ಯುಎನ್‌ಎಸ್‌ಪಿ) ಬುಧವಾರ ತಿರಸ್ಕರಿಸಿದೆ.

ADVERTISEMENT

ಮಂಡಳಿಯ 15 ಸದಸ್ಯರಲ್ಲಿ 12 ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ರಷ್ಯಾ ಮತ್ತು ಅಮೆರಿಕ ಮತ ಚಲಾಯಿಸುವುದರಿಂದ ದೂರ ಉಳಿದವು. 

ಯುಎನ್‌ಎಸ್‌ಪಿಯ ಐದು ಶಾಶ್ವತ ಸದಸ್ಯ ದೇಶಗಳಲ್ಲಿ ಅಮೆರಿಕವು ಒಂದು. ಅಮೆರಿಕ ಮತ ನೀಡದ ಕಾರಣ ಗೊತ್ತುವಳಿ ತಿರಸ್ಕೃತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.