ADVERTISEMENT

ಬಜೆಟ್‌ಗೆ ಹಣ ಪಾವತಿ: ಭಾರತಕ್ಕೆ ವಿಶ್ವಸಂಸ್ಥೆ ಶ್ಲಾಘನೆ

UN thanks India for paying regular budget assessments in full

ಪಿಟಿಐ
Published 11 ಜನವರಿ 2020, 20:00 IST
Last Updated 11 ಜನವರಿ 2020, 20:00 IST
 ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ತನ್ನ ಪಾಲಿನ ಹಣವನ್ನು ಪಾವತಿಸಿರುವ ಭಾರತಕ್ಕೆ ವಿಶ್ವಸಂಸ್ಥೆಯು ಧನ್ಯವಾದ ಸಲ್ಲಿಸಿದೆ.

ವಿಶ್ವಸಂಸ್ಥೆಯ ಒಟ್ಟು 193 ರಾಷ್ಟ್ರಗಳ ಪೈಕಿ, ನಿಗದಿತ ಕಾಲಾವಧಿಯಲ್ಲಿ ಯುಎನ್‌ನ ಬಜೆಟ್‌ಗೆ ಸಂಬಂಧಿಸಿದ ತನ್ನ ಪಾಲಿನ ಹಣ ಪಾವತಿಸಿದ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

‘ಭಾರತವು ಜನವರಿ 10ರಂದು ₹ 166 ಕೋಟಿ ಪಾವತಿಸಿದೆ. ಈ ಹಣ ಪಾವತಿಗೆ ವಿಶ್ವಸಂಸ್ಥೆಯು ಫೆ. 1ರ ತನಕ ಕಾಲಾವಕಾಶ ನೀಡಿತ್ತು’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ದುಜಾರಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ವಿಶ್ವಸಂಸ್ಥೆಯು ಎದುರಿಸುತ್ತಿರುವ ತೀವ್ರ ಹಣಕಾಸು ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಗುಟೆರಸ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸದಸ್ಯ ರಾಷ್ಟ್ರಗಳಿಗೆ ಪತ್ರ ಬರೆಯಲಾಗಿತ್ತು.

ಮತದಾನ ಹಕ್ಕು ಮೊಟಕು: ವೆನಿಜುವೆಲಾ, ಲೆಬನಾನ್, ಮಧ್ಯ ಆಫ್ರಿಕಾದ ಗಣರಾಜ್ಯ, ಗ್ಯಾಂಬಿಯಾ, ಲೆಸೊಥೊ, ಟೋಂಗಾ ಮತ್ತು ಯೆಮೆನ್ ರಾಷ್ಟ್ರಗಳು ಬಾಕಿ ಹಣವನ್ನು ಪಾವತಿಸಿಲ್ಲ. ಹೀಗಾಗಿ, ಈ ದೇಶಗಳು ತಮ್ಮ ಮತ ಚಲಾಯಿಸುವ ಹಕ್ಕು ಕಳೆದುಕೊಳ್ಳಲಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.