ADVERTISEMENT

ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ: ನಿರ್ಧಾರ ಮರುಪರಿಶೀಲನೆಗೆ ವಿಶ್ವಸಂಸ್ಥೆ ಮನವಿ

ರಾಯಿಟರ್ಸ್‌
Published 28 ಜನವರಿ 2024, 15:30 IST
Last Updated 28 ಜನವರಿ 2024, 15:30 IST
.
.   

ದೋಹಾ/ ಜಿನೆವಾ: ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ದೇಶಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಮನವಿ ಮಾಡಿವೆ. ‘ನೀವು ನೀಡುವ ಅನುದಾನವು ಗಾಜಾದಲ್ಲಿ 20 ಲಕ್ಷ ಜನರ ಜೀವ ಉಳಿವಿಗೆ ಕಾರಣವಾಗುತ್ತದೆ’ ಎಂದು ಅವು ಹೇಳಿವೆ.

ಅಮೆರಿಕ, ಜರ್ಮನಿ ಸೇರಿದಂತೆ ಕನಿಷ್ಠ ಒಂಬತ್ತು ದೇಶಗಳು ಅನುದಾನ ನೀಡುವುದನ್ನು ನಿಲ್ಲಿಸಿವೆ. ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ್ದ ಹಠಾತ್‌ ದಾಳಿಯಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಇಸ್ರೇಲ್‌ ಆರೋಪಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿವೆ.

ಹಮಾಸ್‌ ಬಂಡುಕೋರರನ್ನು ಸದೆಬಡಿಯುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಈವರೆಗೆ 26,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಂಘರ್ಷ ಆರಂಭವಾದಾಗಿನಿಂದ ಗಾಜಾದ 23 ಲಕ್ಷ  ಜನರು ವಿಶ್ವಸಂಸ್ಥೆಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.