ADVERTISEMENT

ನಾಗರಿಕರ ರಕ್ಷಣೆಗಾಗಿ ಯುದ್ಧ ನಿಲ್ಲಿಸಿ: ಅಫ್ಗನ್‌, ಪಾಕ್‌ಗೆ ವಿಶ್ವಸಂಸ್ಥೆ ಒತ್ತಾಯ

ಏಜೆನ್ಸೀಸ್
Published 16 ಅಕ್ಟೋಬರ್ 2025, 14:22 IST
Last Updated 16 ಅಕ್ಟೋಬರ್ 2025, 14:22 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ಇಸ್ಲಾಮಾಬಾದ್: ನಾಗರಿಕರ ರಕ್ಷಣೆಗಾಗಿ ಯುದ್ಧವನ್ನು ಶಾಶ್ವತವಾಗಿ ನಿಲ್ಲಿಸುವಂತೆ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನವನ್ನು ವಿಶ್ವಸಂಸ್ಥೆ ಗುರುವಾರ ಒತ್ತಾಯಿಸಿದೆ. ಕಳೆದ ಕೆಲವು ದಿನಗಳಲ್ಲಿ ನಡೆದ ಸಂಘರ್ಷದಲ್ಲಿ ‌ಎರಡೂ ದೇಶಗಳ ಡಜನ್‌ಗಟ್ಟಲೆ ಜನರು ಮೃತಪ‍ಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಅಕ್ಟೋಬರ್ 10ರಿಂದ ಗಡಿಯಾಚೆಗಿನ ಹಿಂಸಾಚಾರ ಹೆಚ್ಚಾಗಿದೆ. 2021ರಲ್ಲಿ ಪಶ್ಚಿಮ ರಾಷ್ಟ್ರಗಳ ಬೆಂಬಲಿತ ಸರ್ಕಾರವು ಪತನಗೊಂಡು ತಾಲಿಬಾನಿಗಳ ಕೈಗೆ ಅಧಿಕಾರ ಸಿಕ್ಕ ನಂತರ ಉಭಯ ದೇಶಗಳ ನಡುವೆ ಉದ್ಭವಿಸಿದ ಗಂಭೀರ ಸ್ವರೂಪದ ಬಿಕ್ಕಟ್ಟು ಇದಾಗಿದೆ.

‘ಶಸ್ತ್ರಾಸ್ತ್ರ ಪ್ರಚೋದನೆಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ’ ಎಂದು ಉಭಯ ದೇಶಗಳು ಹೇಳಿಕೊಂಡಿದ್ದು, ಬುಧವಾರ ಕದನ ವಿರಾಮ ಒಪ್ಪಂದ ಮಾಡಿಕೊಂಡಿವೆ. ರಾತ್ರಿಯಿಡೀ ಯಾವುದೇ ದಾಳಿ ನಡೆದಿಲ್ಲ ಎಂದು ವರದಿಯಾಗಿದ್ದು, ಪ್ರಮುಖ ಗಡಿಗಳು ಗುರುವಾರ ಮುಚ್ಚಲ್ಪ‍ಟ್ಟಿದ್ದವು.

ADVERTISEMENT

‘ಕಾಬೂಲ್‌ನಲ್ಲಿ ಡ್ರೋನ್‌ ದಾಳಿ’

ಕಾಬೂಲ್‌ನ ನಾಗರಿಕ ನೆಲೆಗಳ ಮೇಲೆ ಬುಧವಾರ ಪಾಕಿಸ್ತಾನವು ಎರಡು ಡ್ರೋನ್‌ ದಾಳಿ ನಡೆಸಿತು ಎಂದು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರ ತಿಳಿಸಿದೆ.

‘ಮೊದಲ ಡ್ರೋನ್ ಒಂದು ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಇನ್ನೊಂದು ಡ್ರೋನ್ ಮಾರುಕಟ್ಟೆ ಪ್ರದೇಶದ ಮೇಲೆ ಎರಗಿತು’ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥರ ವಕ್ತಾರ ಖಾಲಿದ್ ಜರ್ದಾನ್ ಅವರು ಮಾಹಿತಿ ನೀಡಿದರು. ದಾಳಿಯಲ್ಲಿ ಎಷ್ಟು ಮಂದಿ ಮೃತಪಟ್ಟರು ಎಂದು ಅವರು ತಿಳಿಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.