ADVERTISEMENT

ಅಫ್ಗಾನಿಸ್ತಾನ: ಮಹಿಳೆ, ಮಕ್ಕಳ ಸಾವು ಪ್ರಕರಣ ಏರಿಕೆ

ಏಜೆನ್ಸೀಸ್
Published 26 ಜುಲೈ 2021, 21:28 IST
Last Updated 26 ಜುಲೈ 2021, 21:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾವು–ನೋವು ಪ್ರಕರಣಗಳು ಈ ಹಿಂದಿನ ಕೆಲ ವರ್ಷಗಳಿಗಿಂತ ಏರಿಕೆ ಕಂಡಿದೆ ಎಂದು ವಿಶ್ವಸಂಸ್ಥೆ ವರದಿ ಸೋಮವಾರ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ವರ್ಷ ದೇಶದಲ್ಲಿ ನಡೆದ ಹಿಂಸಾತ್ಮಕ ಕೃತ್ಯಗಳಿಂದಾಗಿ ಮೃತ ನಾಗರಿಕರ ಸಂಖ್ಯೆ ಶೇ 47 ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.

2021ರ ಮೊದಲಾರ್ಧದಲ್ಲಿ ಸಶಸ್ತ್ರ ಸಂಘರ್ಷದಿಂದಾಗಿ ದೇಶದಲ್ಲಿ 1,659 ನಾಗರಿಕರು ಮೃತಪಟ್ಟಿದ್ದು, 3,524 ಮಂದಿ ಗಾಯಗೊಂಡಿದ್ದಾರೆ. 2009ರಿಂದ ಈವರೆಗೆ ದಾಖಲಾಗಿರುವ ಅತಿ ಹೆಚ್ಚು ಪ್ರಕರಣ ಇದಾಗಿದೆ ಎಂದು ಅದು ತಿಳಿಸಿದೆ.

ADVERTISEMENT

ಮೇ ಮತ್ತು ಜೂನ್‌ ತಿಂಗಳಲ್ಲೇ ನಗರದ ಹೊರ ವಲಯದಲ್ಲಿ ಅತಿ ಹೆಚ್ಚು ಯುದ್ಧಗಳು ನಡೆದಿವೆ. ಒಂದು ವೇಳೆ ಈ ಸಂಘರ್ಷ ಅಧಿಕ ಜನಸಂಖ್ಯೆಯಿರುವ ನಗರ ಪ್ರದೇಶಗಳಲ್ಲಿ ಸಂಭವಿಸಿದರೆ, ಜನರ ಮೇಲೆ ಉಂಟಾಗುವ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.