ADVERTISEMENT

ಅಫ್ಗಾನಿಸ್ತಾನದಲ್ಲಿ ಇಸ್ಲಾಮಿಕ್‌ ಎಮಿರೇಟ್‌ನ ಪುನರ್‌ ಸ್ಥಾಪನೆಗೆ ಬೆಂಬಲವಿಲ್ಲ

ಪಿಟಿಐ
Published 4 ಆಗಸ್ಟ್ 2021, 6:34 IST
Last Updated 4 ಆಗಸ್ಟ್ 2021, 6:34 IST
ಟಿ.ಎಸ್‌. ತಿರುಮೂರ್ತಿ
ಟಿ.ಎಸ್‌. ತಿರುಮೂರ್ತಿ   

ವಿಶ್ವಸಂಸ್ಥೆ: ಅಫ್ಗಾನಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಾಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ದೇಶದಲ್ಲಿ ಇಸ್ಲಾಮಿಕ್‌ ಎಮಿರೇಟ್‌ನ ಪುನರ್‌ ಸ್ಥಾಪನೆಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.

ಇತ್ತೀಚೆಗೆ ಅಫ್ಗಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ಕಚೇರಿಯ ಕಾಂಪೌಂಡ್‌ ಮೇಲೆ ನಡೆದಿದ್ದ ದಾಳಿಯನ್ನು ಭಾರತದ ಅಧ್ಯಕ್ಷತೆಯ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ.

ಭದ್ರತಾ ಮಂಡಳಿಯ ಅಧ್ಯಕ್ಷತೆವಹಿಸಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್‌.ತಿರುಮೂರ್ತಿ ಅವರು, ಅಫ್ಗಾನಿಸ್ತಾನದಲ್ಲಿನ ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ. ಅಲ್ಲಿ ಮತ್ತೆ ಇಸ್ಲಾಮಿಕ್‌ ಎಮಿರೇಟ್‌ ಸ್ಥಾಪನೆಯನ್ನು ಬೆಂಬಲಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಇಸ್ಲಾಮಿಕ್ ರಿಪಬ್ಲಿಕ್ ಮತ್ತು ತಾಲಿಬಾನ್ ಎರಡು ಕಡೆಯಿಂದ ತುರ್ತಾಗಿ ಶಾಂತಿ ಪ್ರಕ್ರಿಯೆಗಳು ನಡೆಯಬೇಕು. ಈ ಮೂಲಕ ಅವರು ತಮ್ಮ ರಾಜಕೀಯ ಸಮಸ್ಯೆ ಬಗೆಹರಿಸಿಕೊಳ್ಳುವುದರ ಜತೆಗೆ ಕದನ ವಿರಾಮವನ್ನು ಅರ್ಥಪೂರ್ಣವಾಗಿ ಅನುಸರಿಸಲು ಮುಂದಾಗಬೇಕು ಎಂದು ಭದ್ರತಾ ಮಂಡಳಿಯ ಸದಸ್ಯರು ಬಯಸುತ್ತಾರೆ ಎಂದು ತಿರುಮೂರ್ತಿ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.