ADVERTISEMENT

ಪಾಕಿಸ್ತಾನ ಆರ್ಥಿಕ ಸಮಸ್ಯೆಗೆ ಚೀನಾ ಕಾರಣ: ಅಮೆರಿಕ ಆರೋಪ

ಏಜೆನ್ಸೀಸ್
Published 12 ಅಕ್ಟೋಬರ್ 2018, 10:01 IST
Last Updated 12 ಅಕ್ಟೋಬರ್ 2018, 10:01 IST
   

ವಾಷಿಂಗ್ಟನ್‌: ಪಾಕಿಸ್ತಾನ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಚೀನಾ ದೇಶವೇ ಜವಾಬ್ದಾರಿ ಎಂದು ಅಮೆರಿಕ ಹರಿಹಾಯ್ದಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದಅಮೆರಿಕದ ಸಾರ್ವಜನಿಕ ಆಡಳಿತಇಲಾಖೆಯ ವಕ್ತಾರೆಹೀಥರ್‌ ನೌರ್ಟ್‌, ‘ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆ ಉಲ್ಬಣಗೊಳ್ಳಲು ಚೀನಾದ ಸಾಲವೇ ಕಾರಣ. ಸಾಲವು ಇಷ್ಟು ಕಠಿಣ ಪರಿಸ್ಥಿತಿಗೆ ದೂಡುತ್ತದೆ ಎಂದು ಸರ್ಕಾರದವರು ಯೋಚಿಸಿರಲಿಲ್ಲ ಎನಿಸುತ್ತದೆ. ಆದರೆ, ಸಾಲ ಸಂಕಷ್ಟವನ್ನು ಹೆಚ್ಚಿಸಿದೆ’ ಎಂದು ದೂರಿದ್ದಾರೆ.

ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ(ಐಎಂಎಫ್‌) ಆರ್ಥಿಕ ನೆರವು ಕೋರಿರುವುದನ್ನು ಉಲ್ಲೇಖಸಿದ ಅವರು,‘ಆರ್ಥಿಕ ನೆರವು ಕೋರಿ ಪಾಕಿಸ್ತಾನವು ಐಎಂಎಫ್‌ಗೆ ಔಪಚಾರಿಕವಾಗಿ ಮನವಿ ಮಾಡಿರುವುದು ತಿಳಿದಿದೆ. ಪಾಕಿಸ್ತಾನದ ಸಾಲ ಪರಿಸ್ಥಿತಿಯನ್ನು ಎಲ್ಲ ಆಯಾಮಗಳಿಂದ ಪರಾಮರ್ಶಿಸಿ, ಕೈಗೊಳ್ಳಬಹುದಾದ ಆರ್ಥಿಕ ಕಾರ್ಯಕ್ರಮದ ಬಗ್ಗೆ ಚಿಂತಿಸಲಾಗುವುದು’ ಎಂದರು.

ADVERTISEMENT

ಪಾಕಿಸ್ತಾನ ನೆರವು ಕೋರಿದ್ದ ವಿಚಾರವನ್ನು ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟೀನ್ ಲಗಾರ್ಡೆ ಗುರುವಾರ ಖಚಿತ ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.