ADVERTISEMENT

PHOTOS: ಅಮೆರಿಕ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿದ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ

ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ, ಅಮೆರಿಕ ಕ್ಯಾಪಿಟಲ್‌ಗೆ ನುಗ್ಗಿದ ಡೊನಾಲ್ಡ್ ಟ್ರಂಪ್ ನೂರಾರು ಬೆಂಬಲಿಗರು, ಪೊಲೀಸರ ವಿರುದ್ಧ ಸಂಘರ್ಷಕ್ಕಿಳಿದರು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಿದ ಬೆಂಬಲಿಗರು ಹಿಂಸಾಚಾರದಲ್ಲಿ ತೊಡಗಿಸಿಕೊಂಡರು. ಇದನ್ನು ತಡೆಯಲು ಪೊಲೀಸರು ಹರಸಾಹಸಪಡಬೇಕಾಯಿತು. ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಪ್ರಮಾಣೀಕರಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. (ಚಿತ್ರ ಕೃಪೆ: ಎಎಫ್‌ಪಿ)

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 4:17 IST
Last Updated 7 ಜನವರಿ 2021, 4:17 IST
ಅಮೆರಿಕ ಕ್ಯಾಪಿಟಲ್‌ಗೆ (ಸಂಸತ್ ಭವನ) ನುಗ್ಗಿ ಹಿಂಸಾಚಾರ ನಡೆಸಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು
ಅಮೆರಿಕ ಕ್ಯಾಪಿಟಲ್‌ಗೆ (ಸಂಸತ್ ಭವನ) ನುಗ್ಗಿ ಹಿಂಸಾಚಾರ ನಡೆಸಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು   
ಅಮೆರಿಕ ಚುನಾವಣೆಯಲ್ಲಿ ಮೋಸ ನಡೆದಿದೆಯೆಂಬ ಆರೋಪ
ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಸಂಘರ್ಷ
ಡೊನಾಲ್ಡ್ ಟ್ರಂಪ್ ಸಾವಿರಾರು ಬೆಂಬಲಿಗರಿಂದ ಅಮೆರಿಕ ಸಂಸತ್ ಭವನಕ್ಕೆ ಮುತ್ತಿಗೆ
ಅಮೆರಿಕ ಜಂಟಿ ಅಧಿವೇಶನದಲ್ಲಿ ಹಾಜರಿದ್ದ ಸದಸ್ಯರಿಗೆ ಭದ್ರತೆ ಏರ್ಪಡಿಸಲಾಗಿದೆ.
ಹಿಂಸಾಚಾರಕ್ಕೆ ತಿರುಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು
ವಾಷಿಂಗ್ಟನ್‌ನಲ್ಲಿ ಸಾವಿರಾರು ಬೆಂಬಲಿಗರಿಂದ ಪ್ರತಿಭಟನಾ ಮೆರವಣಿಗೆ
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರ ಹರಸಾಹಸ
ದಾಳಿಯಿಂದ ಪಾರಾಗಲು ಆತ್ಮ ರಕ್ಷಣೆ ಮಾಡುತ್ತಿರುವ ಸದ್ಯಸರು
ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆಗೆ ವಿರೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.