ನ್ಯೂಯಾರ್ಕ್: ‘ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾದ ಮೇಲೆಯೂ ಸುಂಕ ಹೇರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದುವರೆಗೂ ತೀರ್ಮಾನ ಕೈಗೊಂಡಿಲ್ಲ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದರು.
‘ಟ್ರಂಪ್ ಅವರು ಯೋಚಿಸುತ್ತಿದ್ದು, ಇದುವರೆಗೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಚೀನಾ ಮತ್ತು ಅಮೆರಿಕದ ಸಂಬಂಧವು ಹಲವು ಸ್ತರಗಳಲ್ಲಿ ಇವೆ. ರಷ್ಯಾಗೆ ಸಂಬಂಧಿಸಿದ ವಿಚಾರಗಳಿಂತ ಮಹತ್ವದ ವಿಚಾರಗಳಲ್ಲಿ ನಮ್ಮ ಎರಡು ದೇಶಗಳ ಸಂಬಂಧವು ಏರ್ಪಟ್ಟಿದೆ’ ಎಂದರು.
‘ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಸುಂಕ ವಿಧಿಸಲಾಗಿದೆ. ಚೀನಾ ಕೂಡ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಆದರೆ, ಚೀನಾ ಮೇಲೆ ಯಾಕೆ ಸುಂಕ ವಿಧಿಸಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ವ್ಯಾನ್ಸ್ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.