ADVERTISEMENT

ಅಕ್ರಮ ವಲಸಿಗರು ಗಡೀಪಾರಿಗೆ ಸಹಕರಿಸದ ರಾಷ್ಟ್ರಗಳ ವಿರುದ್ಧ ನಿರ್ಬಂಧ: USಕಾಂಗ್ರೆಸ್

ಪಿಟಿಐ
Published 27 ಜನವರಿ 2025, 10:39 IST
Last Updated 27 ಜನವರಿ 2025, 10:39 IST
<div class="paragraphs"><p>ಮೈಕ್‌ ಜಾನ್ಸನ್‌</p></div>

ಮೈಕ್‌ ಜಾನ್ಸನ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಆದೇಶದಂತೆ ದಾಖಲೆಗಳಿಲ್ಲದ ವಲಸಿಗರನ್ನು ಗಡೀಪಾರು ಮಾಡುವ ಆದೇಶಕ್ಕೆ ಸಹಕರಿಸದ ರಾಷ್ಟ್ರಗಳ ವಿರುದ್ಧ ನಿರ್ಬಂಧ ಹೊರಡಿಸಲು ಯುಎಸ್‌ ಕಾಂಗ್ರೆಸ್‌ ಮುಂದಾಗಿದೆ ಎಂದು ಅಮೆರಿಕದ ಜನಪ್ರತಿನಿಧಿಗಳ ಸಭಾಧ್ಯಕ್ಷ ಮೈಕ್‌ ಜಾನ್ಸನ್‌ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಟ್ರಂಪ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆ ಆರಂಭವಾಗಿದ್ದು, ದೇಶದ ಹಲವೆಡೆ ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

‘ಕೋಲಂಬಿಯಾ ಸೇರಿ ಎಲ್ಲಾ ದೇಶಗಳ ಗಮನಕ್ಕಿರಲಿ, ಅಕ್ರಮ ವಲಸಿಗರ ಗಡೀಪಾರಿಗೆ ಸಂಪೂರ್ಣವಾಗಿ ಸಹಕರಿಸದ ಅಥವಾ ತಮ್ಮ ಪ್ರಜೆಗಳನ್ನು ಸ್ವೀಕರಿಸದ ರಾಷ್ಟ್ರಗಳ ವಿರುದ್ಧ ನಿರ್ಬಂಧ ವಿಧಿಸಲು ಕಾಂಗ್ರೆಸ್‌ ಪೂರ್ಣ ಸಿದ್ಧತೆ ನಡೆಸಿದೆ. ಅಧ್ಯಕ್ಷ ಟ್ರಂಪ್‌ ಅವರು ಅಮೆರಿಕ ಮೊದಲು ಎನ್ನುತ್ತಾರೆ ಅದೇ ರೀತಿ ನಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಕೂಡ ಅವರ ಕಾರ್ಯಸೂಚಿಯಂತೆ ನೀತಿಗಳನ್ನು ಜಾರಿಗೆ ತರಲಿದೆ’ ಎಂದು ಜಾನ್ಸನ್‌ ಹೇಳಿದ್ದಾರೆ. 

ಕೋಲಂಬಿಯಾದ ವಲಸಿಗರನ್ನು ಹೊತ್ತ ಅಮೆರಿಕದ ಎರಡು ಮಿಲಿಟರಿ ವಿಮಾನವನ್ನು ಅಧ್ಯಕ್ಷ ಗುಸ್ತಾವೊ ಪೆಟ್ರೊ ವಾಪಸ್‌ ಕಳುಹಿಸಿದ್ದರು. ಹೀಗಾಗಿ ಟ್ರಂಪ್‌ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಹೇಳಿದ್ದರು. ಇದನ್ನು ಜಾನ್ಸನ್‌ ಬೆಂಬಲಿಸಿದ್ದರು. ಆ ಬಳಿಕ ಕೋಲಂಬಿಯಾ ಯಾವುದೇ ನಿರ್ಬಂಧವಿ‌ಲ್ಲದೆ ತನ್ನ ನಾಗರಿಕರನ್ನು ಕರೆಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಕೋಲಂಬಿಯಾ ಒಪ್ಪಂದವನ್ನು ಗೌರವಿಸುವುದೇ ಆದರೆ ಟ್ರಂಪ್‌ ಶೇ 25 ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದಿಲ್ಲ ಎಂದು ಶ್ವೇತಭವನ ಭಾನುವಾರ ರಾತ್ರಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.