ADVERTISEMENT

ಸುಡಾನ್‌ ಸೇನಾ ಕ್ಷಿಪ್ರಕ್ರಾಂತಿ ಸಾಧ್ಯತೆ; ಗಂಭೀರ ಅಪಾಯದ ಮುನ್ಸೂಚನೆ ಎಂದ ಅಮೆರಿಕ

ಏಜೆನ್ಸೀಸ್
Published 25 ಅಕ್ಟೋಬರ್ 2021, 9:49 IST
Last Updated 25 ಅಕ್ಟೋಬರ್ 2021, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಖಾರ್ಟೂಮ್‌: ಸುಡಾನ್‌ ಸೇನಾ ಕ್ಷಿಪ್ರಕ್ರಾಂತಿಯ ಸಾಧ್ಯತೆಯು ಗಂಭೀರ ಅಪಾಯದ ಮುನ್ಸೂಚನೆ ನೀಡಿದೆ ಎಂದು ಅಮೆರಿಕ ಸೋಮವಾರ ಹೇಳಿದೆ.

‘ಸುಡಾನ್‌ ಪರಿವರ್ತನಾ ಸರ್ಕಾರವನ್ನು ಸೇನಾ ಪಡೆಯು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯ ವರದಿಗಳಿಂದ ಅಮೆರಿಕಕ್ಕೆ ಗಂಭೀರವಾದ ಅಪಾಯದ ಮುನ್ಸೂಚನೆ ದೊರೆತಿದೆ’ ಎಂದು ಆಫ್ರಿಕಾದ ಅಮೆರಿಕ ವಿಶೇಷ ಪ್ರತಿನಿಧಿ ಜೆಫ್ರಿ ಫೆಲ್ಟ್‌ಮನ್‌ ಹೇಳಿದರು.

‘ಇದು ಸಂವಿಧಾನ ಮತ್ತು ಸುಡಾನ್‌ ಜನರ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ’ ಎಂದು ಅವರು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.