ADVERTISEMENT

ಅಮೆರಿಕಕ್ಕೆ ಬೇಕಿದೆ ಭಾರತದ ಬೆಂಬಲ: ಸ್ಕಾಟ್‌ ಬೆಸೆಂಟ್

ಪಿಟಿಐ
Published 15 ಅಕ್ಟೋಬರ್ 2025, 16:05 IST
Last Updated 15 ಅಕ್ಟೋಬರ್ 2025, 16:05 IST
   

ವಾಷಿಂಗ್ಟನ್‌: ಅಪರೂಪದ ಖನಿಜಗಳ ರಪ್ತುಗಳ ಮೇಲೆ‌ ಚೀನಾ ವಿಧಿಸಿರುವ ನಿರ್ಬಂಧವು ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಅಮೆರಿಕವು ಭಾರತ ಸೇರಿದಂತೆ ಇತರ ಮೈತ್ರಿ ದೇಶಗಳ ಬೆಂಬಲವನ್ನು ನಿರೀಕ್ಷಿಸುತ್ತಿದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್ ಅವರು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ ಚೀನಾ ತನ್ನ ನಿಲುವಿನಿಂದ ಜಾಗತಿಕ ಪೂರೈಕೆ ಸರಪಳಿಗೆ ಧಕ್ಕೆ ತರುತ್ತಿರುವುದಲ್ಲದೆ, ಮುಕ್ತ ಜಗತ್ತಿನ ಕೈಗಾರಿಕಾ ನೆಲೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಇದು ಚೀನಾ ಮತ್ತು ಇಡೀ ಜಗತ್ತಿನ ನಡುವೆ ನಡೆಯುತ್ತಿರುವ ಸಂಘರ್ಷವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಚೀನಾ ನಮ್ಮ ಆರ್ಥಿಕತೆಯ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡುವುದಿಲ್ಲ. ಎಲ್ಲ ಆಯಾಮಗಳಿಂದ ನಮ್ಮ ಸಾರ್ವಭೌಮತ್ವ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಮಿತ್ರಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಇದೇ ವಾರ ಸಭೆ ನಡೆಸಲು ನಿರ್ಧರಿಸಿದ್ದು, ಸುಸ್ಥಿರ ಜಾಗತಿಕ ಬೆಂಬಲಕ್ಕಾಗಿ ಯುರೋಪಿಯನ್‌ ರಾಷ್ಟ್ರಗಳು, ಭಾರತ ಸೇರಿದಂತೆ ಏಷ್ಯಾದ ಇತರೆ ದೇಶಗಳು ಸಹಾಯ ಮಾಡುತ್ತವೆ ಎಂದು ನಿರೀಕ್ಷಿಸುತ್ತೇವೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.