ADVERTISEMENT

Video |ಕುವೈತ್‌ನಲ್ಲಿ ಅಮೆರಿಕದ 3 ಯುದ್ಧವಿಮಾನ ಪತನ: ಆಕಾಶದಿಂದ ಧರೆಗುರುಳಿದ ಜೆಟ್

ಏಜೆನ್ಸೀಸ್
Published 2 ಮಾರ್ಚ್ 2026, 10:45 IST
Last Updated 2 ಮಾರ್ಚ್ 2026, 10:45 IST
<div class="paragraphs"><p> ಅಮೆರಿಕದ ಯುದ್ಧವಿಮಾನ ಪತನವಾಗುತ್ತಿರುವ ದೃಶ್ಯ</p></div>

ಅಮೆರಿಕದ ಯುದ್ಧವಿಮಾನ ಪತನವಾಗುತ್ತಿರುವ ದೃಶ್ಯ

   

ದುಬೈ: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಕುವೈತ್‌ನಲ್ಲಿ ಅಮೆರಿಕದ ಮೂರು ಎಫ್‌-15 ಯುದ್ಧವಿಮಾನಗಳು ಪತನಗೊಂಡಿದವೆ ಎಂದು ವರದಿಯಾಗಿದೆ.

ಕುವೈತ್‌ನಲ್ಲಿ ಎಫ್‌-15 ಯುದ್ಧವಿಮಾನಗಳು ಆಕಾಶದಿಂದ ಧರೆಗುರುಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಯುದ್ಧವಿಮಾನದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ವಿಮಾನ ಅಪಘಾತಕ್ಕೆ ಮುನ್ನ ಪೈಲಟ್ ವಿಮಾನದಿಂದ ಜಿಗಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಲ್ಫ್ ನಗರಗಳಾದ ರಿಯಾದ್‌, ದುಬೈ, ಅಬುಧಾಬಿ, ದೋಹಾ, ಮನಾಮದಲ್ಲಿ ಸೋಮವಾರವೂ ಪ್ರಬಲ ಸ್ಫೋಟಗಳು ಸಂಭವಿಸಿವೆ. ಅಮೆರಿಕ–ಇಸ್ರೇಲ್ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಮೂರನೇ ದಿನವೂ ದಾಳಿ ಮುಂದುವರಿಸಿದೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಹಲವು ಅಮೆರಿಕದ ಸೇನಾ ವಿಮಾನಗಳು ಅಪಘಾತಕ್ಕೀಡಾಗಿದ್ದು, ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಕುವೈತ್‌ನ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.