
ಪ್ರಜಾವಾಣಿ ವಾರ್ತೆ
ಕರಾಕಸ್: ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆಹಿಡಿಯಲು ಅಮೆರಿಕ ಪಡೆಗಳು ನಡೆಸಿದ ದಾಳಿಯಲ್ಲಿ ವೆನೆಜುವೆಲಾ ಮತ್ತು ಕ್ಯೂಬಾದ 55 ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿವೆ ಎಂದು ಕ್ಯಾರಕಾಸ್ ಮತ್ತು ಹವಾನಾ ಮಂಗಳವಾರ ಪ್ರಕಟಿಸಿದ ಅಂಕಿ–ಅಂಶಗಳು ತಿಳಿಸಿವೆ.
ಶನಿವಾರ ಅಮೆರಿಕ ನಡೆಸಿದ ದಾಳಿಯಲ್ಲಿ 23 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವೆನೆಜುವೆಲಾದ ಸೇನೆ ತಿಳಿಸಿದೆ. ಕರಾಕಸ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ತನ್ನ ಸಶಸ್ತ್ರ ಪಡೆಗಳ 32 ಮಂದಿ ಮೃತಪಟ್ಟಿರುವುದಾಗಿ ಕ್ಯೂಬಾ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.