ಡೊನಾಲ್ಡ್ ಟ್ರಂಪ್
– ಎ.ಐ ಚಿತ್ರ
ನ್ಯೂಯಾರ್ಕ್ / ವಾಷಿಂಗ್ಟನ್: ಅಮೆರಿಕವನ್ನು ಬೆಂಬಲಿಸುವ ವಿದೇಶಿಗರಿಗೆ ‘ಗೋಲ್ಡ್ ಕಾರ್ಡ್’ ವಿಸಾ ನೀಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.
ಅಮೆರಿಕದ ಖಜಾನೆಗೆ 10 ಲಕ್ಷ ಮಿಲಿಯನ್ ಡಾಲರ್ ನೀಡುವ ಅಥವಾ 20 ಲಕ್ಷ ಮಿಲಿಯನ್ ಡಾಲರ್ ಮೌಲ್ಯದ ಪ್ರಯೋಜಕತ್ವ ನೀಡುವ ಸಂಸ್ಥೆಗಳಿಗೆ ಈ ಗೋಲ್ಡ್ ಕಾರ್ಡ್ ನೀಲಾಗುತ್ತದೆ. ಇದು ಮುಂದೆ ಗ್ರೀನ್ ಕಾರ್ಡ್ ಪಡೆಯಲು ಕೂಡ ಸಹಾಯಕವಾಗುತ್ತದೆ.
‘ನಾವು ನೂರಾರು ಬಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸುತ್ತೇವೆ. ಕಂಪನಿಗಳು ತಮಗೆ ಬೇಕಾದ ವ್ಯಕ್ತಿಗಳನ್ನು ಉಳಿಸಿಕೊಳ್ಳಬಹುದು. ಕಂಪನಿಗಳಿಗೆ ನುರಿತ ಕೆಲಸಗಾರು ಬೇಕಾಗಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.
ಗೋಲ್ಡ್ ಕಾರ್ಡ್ ಒಂದು ಅದ್ಭುತ ವಿಷಯ. ನಾವು ಹಣವನ್ನು ಸಂಗ್ರಹಿಸಿ ತೆರಿಗೆಯನ್ನು ಕಡಿಮೆ ಮಾಡುತ್ತೇವೆ. ಸಾಲವನ್ನು ಕಡಿಮೆ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
‘ಇದಕ್ಕೆ ಅರ್ಜಿ ಸಲ್ಲಿಸಲು ಮರುಪಾವತಿ ಮಾಡಲಾಗದ ಶುಲ್ಕ ಪಾವತಿಸಬೇಕು. ಹಣ ಸ್ವೀಕರಿಸಿದ ಬಳಿಕ ವಿಸಾ ನಿರ್ಣಯ ಪ್ರಕ್ರಿಯೆ ನಡೆಯುತ್ತದೆ. ಸಮಯಕ್ಕೆ ಸರಿಯಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.