ADVERTISEMENT

'ಐಸ್‌ ಬಕೆಟ್‌ ಚಾಲೆಂಜ್‌' ಕಾರ್ಯಕರ್ತ ಪ್ಯಾಟ್ರಿಕ್‌ ಕ್ವಿನ್‌ ನಿಧನ

ಏಜೆನ್ಸೀಸ್
Published 23 ನವೆಂಬರ್ 2020, 17:27 IST
Last Updated 23 ನವೆಂಬರ್ 2020, 17:27 IST
ಪ್ಯಾಟ್ರಿಕ್‌ ಕ್ವಿನ್‌ (ಫೇಸ್‌ಬುಕ್‌ ಚಿತ್ರ)
ಪ್ಯಾಟ್ರಿಕ್‌ ಕ್ವಿನ್‌ (ಫೇಸ್‌ಬುಕ್‌ ಚಿತ್ರ)   

ನ್ಯೂಯಾರ್ಕ್‌: ಮಾರಣಾಂತಿಕ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಎಲ್‌ಎಸ್‌) ಕಾಯಿಲೆಗೆ ತುತ್ತಾದವರಿಗೆ ನೆರವು ನೀಡಲು ಆರಂಭಿಸಲಾಗಿದ್ದ 'ಐಸ್ ಬಕೆಟ್ ಚಾಲೆಂಜ್' ಎಂಬ ಜಾಗತಿಕ ಅಭಿಯಾನಕ್ಕೆ ನೆರವಾಗಿದ್ದ ಅಮೆರಿಕದ ಪ್ಯಾಟ್ರಿಕ್‌ ಕ್ವಿನ್‌ (37) ಕೊನೆಯುಸಿರೆಳೆದಿದ್ದಾರೆ.

ಐಸ್‌ ಬಕೆಟ್‌ ಚಾಲೆಂಜ್‌ನ ಕಾರ್ಯಕರ್ತರಾದ, ನ್ಯೂಯಾರ್ಕ್ ಮೂಲದ ಪ್ಯಾಟ್ರಿಕ್ ಕ್ವಿನ್ ಅವರಿಗೆ ಎಎಲ್‌ಎಸ್‌ ಇರುವುದು 2013ರಲ್ಲಿ ಗೊತ್ತಾಗಿತ್ತು.

"ಇಂದು ಬೆಳಗ್ಗೆ ಪ್ಯಾಟ್ರಿಕ್ ನಮ್ಮನ್ನು ಅಗಲಿದರು ಎಂಬ ಸುದ್ದಿ ಹಂಚಿಕೊಳ್ಳಬೇಕಾಗಿರುವುದು ಬಹಳ ದುಃಖದ ಸಂಗತಿಯಾಗಿದೆ" ಎಂದು ಅವರ ತಂಡದ ಸದಸ್ಯರು ಕ್ವಿನ್‌ ಅವರ "ಕ್ವಿನ್ ಫಾರ್ ದಿ ವಿನ್" ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದರು.

ADVERTISEMENT

ಕ್ವಿನ್ 'ಐಸ್ ಬಕೆಟ್ ಚಾಲೆಂಜ್' ಅಭಿಯಾನವನ್ನು ಅನ್ನು ಪ್ರಾರಂಭಿಸಿರಲಿಲ್ಲ. ಆದರೆ, 2014 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದ ಅಭಿಯಾನವು ಪ್ರಚಾರಕ್ಕೆ ಬರಲು ಕ್ವಿನ್‌ ಮತ್ತು ಅವರ ಕುಟುಂಬ ಸದಸ್ಯರು, ಸ್ನೇಹಿತರು ನೆರವಾಗಿದ್ದರು.

ಈ ಅಭಿಯಾನವು ವಿಶ್ವದಾದ್ಯಂತ 220 ದಶಲಕ್ಷ ಡಾಲರ್‌ ಹಣ ಸಂಗ್ರಹಿಸಿ, ಎಎಲ್‌ಎಸ್‌ ಕಾಯಿಲೆ ಅಧ್ಯಯನಕ್ಕೆ ನೆರವು ಒದಗಿಸಿತು. ಎಎಲ್‌ಎಸ್‌ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.