ADVERTISEMENT

ಅಮೆರಿಕ-ಇಸ್ರೇಲ್‌ ಜಂಟಿ ದಾಳಿ: ಇರಾನ್‌ನ ನಟಾಂಜ್ ಪರಮಾಣು ಸ್ಥಾವರಕ್ಕೆ ಹಾನಿ

ಏಜೆನ್ಸೀಸ್
Published 3 ಮಾರ್ಚ್ 2026, 16:12 IST
Last Updated 3 ಮಾರ್ಚ್ 2026, 16:12 IST
   

ವಿಯೆನ್ನಾ: ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ನಡೆಸುತ್ತಿರುವ ವೈಮಾನಿಕ ದಾಳಿ ವೇಳೆ, ಇರಾನ್‌ನ ನಟಾಂಜ್ ಪರಮಾಣು ಸ್ಥಾವರದಲ್ಲಿನ ವಿಕಿರಣಶೀಲ ಲೋಹ ಶುದ್ಧೀಕರಣ ಘಟಕಕ್ಕೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(ಐಎಇಎ) ಮಂಗಳವಾರ ಹೇಳಿದೆ.

‘ಪರಮಾಣು ಸ್ಥಾವರದ ಪ್ರವೇಶದಲ್ಲಿನ ಕಟ್ಟಡಗಳಿಗೆ ಹಾನಿಯಾಗಿದೆ. ಈ ಹಾನಿಯಿಂದಾಗಿ ವಿಕಿರಣ ಸೋರಿಕೆಯಾಗುವ ಸಾಧ್ಯತೆಗಳು ಕಡಿಮೆ’ ಎಂದೂ ಏಜೆನ್ಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT