
ವಾಷಿಂಗ್ಟನ್: ಇರಾನ್ ವಿರುದ್ಧ ಸಮರ ಸಾರಿರುವ ಅಮೆರಿಕವು ಪಶ್ಚಿಮ ಏಷ್ಯಾದಲ್ಲಿ ತನ್ನ ಸೇನಾ ಪ್ರಾಬಲ್ಯವನ್ನು ಹೊಂದಿದೆ. ಅಮೆರಿಕದ ಯುದ್ಧನೌಕೆ, ಯುದ್ಧವಿಮಾನ ಮತ್ತು ಇಂಧನ ಮರುಪೂರಣಕ್ಕೆ ಬಳಸುವ ವಿಮಾನ ಸೇರಿದಂತೆ ಹಲವು ಸೇನಾ ಪರಿಕರಗಳು ಅಲ್ಲಿವೆ.
ಅಮೆರಿಕವು ಪಶ್ಚಿಮ ಏಷ್ಯಾದಲ್ಲಿ 12ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ಹೊಂದಿದೆ. ಅರಬ್ಬಿ ಸಮುದ್ರದಲ್ಲಿ ಯುದ್ಧನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನಿಯೋಜನೆಗೊಂಡಿದೆ. ವಿಶ್ವದ ಅತಿದೊಡ್ಡ ಯುದ್ಧವಿಮಾನ ವಾಹಕ ನೌಕೆ ಯುಎಸ್‌ಎಸ್ ಗೆರಾಲ್ಡ್ ಆರ್ ಫೋರ್ಡ್ ಮೆಡಿಟರೇನಿಯನ್ ಸಾಗರದಲ್ಲಿದೆ. ದೇಶವೊಂದು ಪಶ್ಚಿಮ ಏಷ್ಯಾದಲ್ಲಿ ತನ್ನ ಎರಡು ಯುದ್ಧ ವಿಮಾನ ವಾಹಕ ನೌಕೆಗಳನ್ನು ಹೊಂದಿರುವುದು ತೀರಾ ಅಪರೂಪ.
ಎಫ್–22 ರಾಫ್ಟರ್ ಮತ್ತು ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಎಫ್–35 ಯುದ್ಧವಿಮಾನ, ಎಫ್–15 ಮತ್ತು ಎಫ್–16 ಯುದ್ಧವಿಮಾನ ಮತ್ತು ಕೆಸಿ–135 ಇಂಧನ ಮರುಪೂರಣ ವಿಮಾನ ಸೇರಿದಂತೆ 12ಕ್ಕೂ ಹೆಚ್ಚು ಯುದ್ಧ ವಿಮಾನಗಳು ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿವೆ. ಇದರೊಂದಿಗೆ ಹಲವಾರು ಕ್ಷಿಪಣಿ ನಾಶಕಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.