ಇರಾನ್ ಮೇಲೆ ಅಮೆರಿಕ ದಾಳಿ
ಬೆಂಗಳೂರು: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ನಡೆದ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಏತನ್ಮಧ್ಯೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಸೇನೆಯಾಗಿ ನಿಯೋಜನೆಗೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್ ಮೇಲಿನ ತನ್ನ ದಾಳಿಗೆ ವಿಡಿಯೊ ಸಾಕ್ಷ್ಯ ಬಿಡುಗಡೆ ಮಾಡಿ ಇರಾನ್ ದೇಶವನ್ನು ಹರಿತ ಮಾತುಗಳಿಂದಲೂ ತಿವಿದಿದೆ.
ಆ ಮೂಲಕ ಅಮೆರಿಕವು, ಇರಾನ್ ಅನ್ನು ಹಾವಿಗೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಎಕ್ಸ್ ಮಾಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 47 ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ನರನ್ನು ಕೊಂದಿದೆ. ನಿನ್ನೆ, ದೊಡ್ಡ ಪ್ರಮಾಣದ ನಮ್ಮ ದಾಳಿಯು ವಿಷದ ಹಾವಿನ ತಲೆಯನ್ನು ಕತ್ತರಿಸಿತು ಎಂದು ಪೋಸ್ಟ್ ಮಾಡಿದೆ.
ಅಮೆರಿಕವು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ ಹಾಗೂ IRGCಗೆ ಭೂಮಿ ಮೇಲೆ ಇನ್ನುಂದೆ ಅಡ್ರೆಸ್ ಸಹ ಇರುವುದಿಲ್ಲ ಎಂದು ಗೇಲಿಯಾಡಿದೆ.
ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕ ಪಶ್ಚಿಮ ಏಷ್ಯಾದಲ್ಲಿನ ತನ್ನ ಸೇನಾ ನೆಲೆಗಳನ್ನು ಬಳಸಿಕೊಂಡಿದೆ. ಇಲ್ಲಿರುವ ಅಮೆರಿಕದ ವಿಮಾನಗಳನ್ನು ಗುರಿಯಾಗಿಸಿಕೊಂಡು ಇರಾನ್ ಸಹ ದಾಳಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.