ADVERTISEMENT

ಅಮೆರಿಕಕ್ಕೆ ಹೊಸ ಪೀಳಿಗೆ ನಾಯಕತ್ವ ಅಗತ್ಯ: ನಿಕ್ಕಿ ಹ್ಯಾಲೆ

ಪಿಟಿಐ
Published 17 ಫೆಬ್ರುವರಿ 2023, 12:56 IST
Last Updated 17 ಫೆಬ್ರುವರಿ 2023, 12:56 IST
ನಿಕ್ಕಿ ಹ್ಯಾಲಿ
ನಿಕ್ಕಿ ಹ್ಯಾಲಿ   

ವಾಷಿಂಗ್ಟನ್‌: ಅಮೆರಿಕಕ್ಕೆ ಈಗ ಹೊಸ ಪೀಳಿಗೆಯ ನಾಯಕತ್ವದ ಅಗತ್ಯವಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಚಾರ ಆರಂಭಿಸಿರುವ ರಿಪಬ್ಲಿಕನ್‌ ಪಕ್ಷದ ನಿಕ್ಕಿ ಹ್ಯಾಲೆ ಪ್ರತಿಪಾದಿಸಿದ್ದಾರೆ.

‘ನಮ್ಮಲ್ಲಿ ಹಲವು ರಾಜಕಾರಣಿಗಳಿದ್ದಾರೆ. ಆದರೆ, ಆಡಳಿತಾವಧಿ ಮಿತಿ ನಿಗದಿಪಡಿಸಿಕೊಳ್ಳುವುದು ಅಗತ್ಯವಿದೆ. 75 ವರ್ಷ ಮೀರಿದ ಚುನಾಯಿತ ಸದಸ್ಯರ ಆಡಳಿತ ಸಾಮರ್ಥ್ಯ ಪರೀಕ್ಷೆಯೂ ಆಗಬೇಕಾಗಿದೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಆದರೆ, ಶ್ವೇತಭವನ ಈ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲ. ನಾವು ಇಂತಹ ಮಾದರಿಯ ವಾಗ್ದಾಳಿಯನ್ನು ಹಿಂದೆಯೂ ಕೇಳಿದ್ದೇವೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೈನ್‌ ಜೀನ್‌ ಪಿಯರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿರುವ ಡೊನಾಲ್ಡ್ ಟ್ರಂಪ್‌ ಮತ್ತು ಹಾಲಿ ಅಧ್ಯಕ್ಷ ಜೋ ಬೈಡನ್‌ ಇಬ್ಬರೂ 75 ವರ್ಷ ಮೀರಿದವರಾಗಿದ್ದಾರೆ.

ADVERTISEMENT

ಅಮೆರಿಕಕ್ಕೆ ಹೊಸ ಪೀಳಿಗೆಯ ನಾಯಕತ್ವ ಈಗಿನ ಅಗತ್ಯವಾಗಿದೆ. ಯಥಾಸ್ಥಿತಿಯನ್ನು ಮೀರಿ ನಡೆಯಬೇಕಾಗಿದೆ. ನಾವು ಭವಿಷ್ಯದ ಚಿಂತನೆ ನಡೆಸಲು ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.