ADVERTISEMENT

ಭಾರತದ ಮೇಲೆ ಟ್ರಂಪ್ ಹೇರಿದ್ದ ಶೇ 50 ಸುಂಕ ರದ್ದಿಗೆ ಅಮೆರಿಕ ಸಂಸತ್ತಲ್ಲಿ ನಿಲುವಳಿ

ಪಿಟಿಐ
Published 13 ಡಿಸೆಂಬರ್ 2025, 6:02 IST
Last Updated 13 ಡಿಸೆಂಬರ್ 2025, 6:02 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ಎ.ಐ ಚಿತ್ರ

ನ್ಯೂಯಾರ್ಕ್ / ವಾಷಿಂಗ್ಟನ್: ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ 50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ. ಇದು ‘ಬೇಜವಾಬ್ದಾರಿ ಸುಂಕ ತಂತ್ರ’ವಾಗಿದೆ ಎಂದಿರುವ ಅವರು, ಇದರಿಂದ ನಿರ್ಣಾಯಕ ಪಾಲುದಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.

ADVERTISEMENT

ಉತ್ತರ ಕರೊಲಿನಾದ ಸಂಸದೆ ದೆಬ್ರೊ ರಾಸ್, ಟೆಕ್ಸಸ್ ಸಂಸದ ಮಾರ್ಕ್ ವೇಸಿ ಹಾಗೂ ಇಲ್ಲಿನಾಯ್ಸ್‌ ಸಂಸದ ರಾಜ ಕೃಷ್ಣಮೂರ್ತಿ ಶುಕ್ರವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ನಿಲುವಳಿ ಮಂಡಿಸಿದ್ದಾರೆ.

‌ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದಕ್ಕೆ ಶೇ 25ರಷ್ಟು ದಂಡನಾತ್ಮಕ ಸುಂಕ ಸೇರಿ ಒಟ್ಟು ಶೇ 50ರಷ್ಟು ಪ್ರತಿಸುಂಕ ಹೇರಿದ್ದರು.

ಒಂದು ವೇಳೆ ಈ ನಿಲುವಳಿಗೆ ಸಂಸತ್ತಿನ ಒಪ್ಪಿಗೆ ಸಿಕ್ಕರೆ, ವಿಶೇಷಾಧಿಕಾರ ಬಳಸಿ ಟ್ರಂಪ್ ಹೇರಿದ್ದ ಶೇ 50ರಷ್ಟು ಸುಂಕ ಕೊನೆಗೊಳ್ಳಲಿದೆ.

‘ಭಾರತದ ಬಗ್ಗೆ ಟ್ರಂಪ್ ಅವರ ಬೇಜವಾಬ್ದಾರಿ ಸುಂಕ ತಂತ್ರವು ನಿರ್ಣಾಯಕ ಪಾಲುದಾರಿಕೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

ಈ ಸುಂಕ ಹೇರಿಕೆಯು ಅಮೆರಿಕದ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಪೂರೈಕೆ ಸರಪಳಿಗಳಿಗೆ ಅಡ್ಡಿಯುಂಟುಮಾಡುತ್ತವೆ. ಅಮೆರಿಕದ ಕಾರ್ಮಿಕರಿಗೆ ಹಾನಿ ಮಾಡುತ್ತದೆ ಮಾತ್ರವಲ್ಲ, ಗ್ರಾಹಕರಿಗೆ ವೆಚ್ಚವನ್ನು ಹೆಚ್ಚಿಸುತ್ತವೆ’ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ

ಉತ್ತರ ಕೆರೊಲಿನಾದ ಆರ್ಥಿಕತೆಯು ವ್ಯಾಪಾರ, ಹೂಡಿಕೆ ಮತ್ತು ಭಾರತ ಮೂಲದ ಅಮೆರಿಕನ್ನರ ಮೂಲಕ ಭಾರತದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ರಾಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.