ADVERTISEMENT

ಆಸಿಯಾನ್ ನಾಯಕರ ಜತೆ ವಿಶೇಷ ಶೃಂಗಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಒಲವು

ಪಿಟಿಐ
Published 30 ಮಾರ್ಚ್ 2022, 13:14 IST
Last Updated 30 ಮಾರ್ಚ್ 2022, 13:14 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಆಗ್ನೇಯ ಏಷ್ಯಾ ದೇಶಗಳ ಸಂಘಟನೆಯ(ಆಸಿಯಾನ್) ನಾಯಕರ ಜತೆ ವಿಶೇಷ ಶೃಂಗಸಭೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಘೋಷಣೆ ಮಾಡಿದ್ದಾರೆ.

ಸಿಂಗಪುರ ಪ್ರಧಾನಿಲೀ ಸೀನ್ ಲೂಂಗ್ ಅವರ ಜತೆ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ವಿಶೇಷ ಶೃಂಗದ ಬಗ್ಗೆ ಘೋಷಣೆ ಮಾಡಲಾಗಿದೆ.ಆದರೆ ಈ ಶೃಂಗಸಭೆ ನಡೆಯುವ ದಿನಾಂಕ ಘೋಷಣೆ ಮಾಡಲಾಗಿಲ್ಲ.

'ಪ್ರಧಾನಿ ಲೀ ಮತ್ತು ನಾನು ಆಸಿಯಾನ್ ದೇಶಗಳ ಕುರಿತ ಬದ್ಧತೆಯ ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಅಲ್ಲದೆ ವಾಷಿಂಗ್ಟನ್‌ನಲ್ಲಿ ಆಸಿಯಾನ್ ನಾಯಕರ ವಿಶೇಷ ಶೃಂಗ ಏರ್ಪಡಿಸಲು ನಿರ್ಧರಿಸಿದ್ದೇನೆ' ಎಂದು ಬೈಡನ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.