ADVERTISEMENT

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ವಾಪಸ್: ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 5:22 IST
Last Updated 26 ಜನವರಿ 2025, 5:22 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ರಾಯಿಟರ್ಸ್ ಚಿತ್ರ

ಲಾಸ್‌ ವೇಗಾಸ್‌: ಜಾಗತಿಕ ಆರೋಗ್ಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸದ ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್‌ಒ) ಹೊರನಡೆಯುವುದಾಗಿ ಇತ್ತೀಚೆಗೆ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡಬ್ಲ್ಯುಎಚ್‌ಒಗೆ ಹಿಂದಿರುಗುವ ಬಗ್ಗೆ ಆಲೋಚಿಸಲಾಗುವುದು ಎಂದಿದ್ದಾರೆ.

ADVERTISEMENT

ಲಾಸ್‌ ವೇಗಾಸ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, 'ಡಬ್ಲ್ಯುಎಚ್‌ಒಗೆ ಮತ್ತೆ ಸೇರುವುದನ್ನು ಬಹುಶಃ ನಾವು ಪರಿಗಣಿಸಬಹುದು. ನನಗೆ ಗೊತ್ತಿಲ್ಲ. ಅದನ್ನು (ಡಬ್ಲ್ಯುಎಚ್‌ಒ) ಸ್ವಚ್ಛಗೊಳಿಸಬೇಕಿದೆ' ಎಂದಿದ್ದಾರೆ.

ನೆರೆದಿದ್ದವರನ್ನು ಉದ್ದೇಶಿಸಿ, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಅಮೆರಿಕ ಡಬ್ಲ್ಯುಎಚ್‌ಒಗೆ ನೀಡುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ 2ನೇ ಅವಧಿಗೆ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಿದ್ದ ಟ್ರಂಪ್‌, ಅದೇ ದಿನ ಡಬ್ಲ್ಯುಎಚ್‌ಒನಿಂದ ಹೊರನಡೆಯುವುದಾಗಿ ಘೋಷಿಸಿದ್ದರು. ಕೋವಿಡ್–19 ಸಾಂಕ್ರಾಮಿಕ ಹಾಗೂ ಇತರ ಆರೋಗ್ಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಡಬ್ಲ್ಯುಎಚ್ಒ ವಿಫಲವಾಗಿದೆ ಎಂದು ಆರೋಪಿಸಿದ್ದರು.

2026ರ ಜನವರಿ 22ರ ವೇಳೆಗೆ ಅಮೆರಿಕ ಹೊರನಡೆಯಲಿದೆ ಎಂದು ವಿಶ್ವಸಂಸ್ಥೆಯೂ ಖಚಿತಪಡಿಸಿದೆ.

ಡಬ್ಲ್ಯುಎಚ್‌ಒಗೆ ಆರ್ಥಿಕ ನೆರವು ನೀಡುವ ಅತಿದೊಡ್ಡ ರಾಷ್ಟ್ರವಾಗಿರುವ ಅಮೆರಿಕ, ಒಟ್ಟು ನಿಧಿಯಲ್ಲಿ ಶೇ 18ರಷ್ಟು ಕೊಡುಗೆ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.