ADVERTISEMENT

9/11 ಭಯೋತ್ಪಾದಕರ ದಾಳಿ: ಕೋವಿಡ್‌ ನಡುವೆಯೇ ಗೌರವ ಸಲ್ಲಿಕೆ

ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ಉಗ್ರರ ದಾಳಿ: ಮೃತರ ಸ್ಮರಣೆ

ಪಿಟಿಐ
Published 11 ಸೆಪ್ಟೆಂಬರ್ 2020, 9:58 IST
Last Updated 11 ಸೆಪ್ಟೆಂಬರ್ 2020, 9:58 IST
ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರ – ರಾಯಿಟರ್ಸ್‌ ಚಿತ್ರ (ಸಂಗ್ರಹ ಚಿತ್ರ)
ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರ – ರಾಯಿಟರ್ಸ್‌ ಚಿತ್ರ (ಸಂಗ್ರಹ ಚಿತ್ರ)   

ನ್ಯೂಯಾರ್ಕ್: ಇಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಭೀಕರ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ಅಮೆರಿಕ ಗೌರವ ಸಲ್ಲಿಸಿತು.

ಕೋವಿಡ್‌–19 ಕಾರಣ ಹಲವಾರು ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ನಡುವೆ ಗೌರವ ಸಮರ್ಪಣೆ ಸಭೆಗಳು ನಡೆದವು. ಆದರೆ, ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಅದರಲ್ಲೂ, ನ್ಯೂಯಾರ್ಕ್‌ನಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಿರುವ ಕಾರಣ, ಎರಡು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉಗ್ರರ ದಾಳಿಗೆ ತುತ್ತಾಗಿದ್ದ ವಿಶ್ವ ವಾಣಿಜ್ಯಕೇಂದ್ರ ಬಳಿ ನಿರ್ಮಿಸಿರುವ ಸ್ಮಾರಕ ಬಳಿ ಹಾಗೂ ಕಟ್ಟಡದ ಮೂಲೆಯೊಂದರಲ್ಲಿ ಕಾರ್ಯಕ್ರಮ ನಡೆಯಿತು.

ADVERTISEMENT

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡೆಮಾಕ್ರಟಿಕ್ ಪಕ್ಷದ ನಾಯಕ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡನ್‌ ಅವರು ಸ್ಮಾರಕದ ಬಳಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.