ADVERTISEMENT

‘ಇರಾನ್‌ ಪರಮಾಣು ಕಾರ್ಯಕ್ರಮ: ಚರ್ಚೆ ನಡೆಸಲು ಅಮೆರಿಕ ಸಿದ್ದ’

ಪಿಟಿಐ
Published 19 ಫೆಬ್ರುವರಿ 2021, 6:25 IST
Last Updated 19 ಫೆಬ್ರುವರಿ 2021, 6:25 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ‘ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಜಗತ್ತಿನ ಪ್ರಮುಖ ರಾಷ್ಟ್ರಗಳು ಮತ್ತು ಇರಾನ್‌ನೊಂದಿಗೆ ರಾಜತಾಂತ್ರಿಕವಾಗಿಚರ್ಚಿಸಲು ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಸರ್ಕಾರ ಸಿದ್ಧವಿದೆ’ ಎಂದು ಅಮೆರಿಕ ಹೇಳಿದೆ.

2018ರಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 2015ರ ಪರಮಾಣು ಒಪ್ಪಂದಿಂದ ಹೊರ ಬಂದಿದ್ದರು. ಇದೀಗ ಬೈಡನ್‌ ಅಧ್ಯಕ್ಷತೆಯಲ್ಲಿ ಅಮೆರಿಕ ಈ ಒಪ್ಪಂದದಲ್ಲಿ ಮರು ಸೇರ್ಪಡೆಯಾಗಲು ಪ್ರಯತ್ನಿಸುತ್ತಿದೆ.

‘ಈ ಪರಮಾಣು ಒಪ್ಪಂದಕ್ಕೆ ಇರಾನ್‌ ಮರಳಿದರೆ, ಅಮೆರಿಕ ಕೂಡ ಮರು ಸೇರ್ಪಡೆಯಾಗಲು ಸಿದ್ಧವಿದೆ’ ಎಂದು ಬೈಡನ್‌ ಮತ್ತು ಅವರ ಸಲಹೆಗಾರರು ತಿಳಿಸಿದ್ದಾರೆ.

ADVERTISEMENT

‘ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ರಾಜತಾಂತ್ರಿಕ ಮಾರ್ಗವನ್ನು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 5 ಕಾಯಂ ದೇಶಗಳು, ಜರ್ಮನಿ (ಪಿ 5+1) ಹಾಗೂ ಇರಾನ್‌ ಮತ್ತೆ ಮಾತುಕತೆ ನಡೆಸಬೇಕು ಎಂಬ ಐರೋಪ‍್ಯ ಸಮುದಾಯದ ಉನ್ನತ ಪ್ರತಿನಿಧಿಗಳು ಕಳುಹಿಸಿರುವ ಆಹ್ವಾನವನ್ನು ಅಮೆರಿಕ ಸ್ವೀಕರಿಸುತ್ತದೆ‘ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.