ADVERTISEMENT

ಯುದ್ಧಪೀಡಿತ ‍ಪ್ರದೇಶಗಳಿಗೆ ಅಮೆರಿಕ ₹7.9 ಲಕ್ಷ ಕೋಟಿ ಪರಿಹಾರ ಮಸೂದೆ

ಪಿಟಿಐ
Published 24 ಏಪ್ರಿಲ್ 2024, 19:55 IST
Last Updated 24 ಏಪ್ರಿಲ್ 2024, 19:55 IST
. 
   

ವಾಷಿಂಗ್ಟನ್‌: ಯುದ್ಧಪೀಡಿತ ಉಕ್ರೇನ್‌ ಮತ್ತು ಇಸ್ರೇಲ್‌ಗಳಿಗೆ 95.3 ಶತಕೋಟಿ ಡಾಲರ್‌ (₹7.9 ಲಕ್ಷ ಕೋಟಿ) ನೆರವು ಒದಗಿಸುವ ಮತ್ತು ತೈವಾನ್‌ ಸೇರಿದಂತೆ ಹಿಂದೂ ಮಹಾಸಾಗರ– ಫೆಸಿಫಿಕ್‌ ಪ್ರದೇಶದಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಭದ್ರತೆಯನ್ನು ಬಲಪಡಿಸುವ ಮಸೂದೆಗೆ ಅಮೆರಿಕ ಸಂಸತ್ತು ಹೆಚ್ಚಿನ ಮತಗಳೊಂದಿಗೆ ಬೆಂಬಲ ನೀಡಿದೆ. 

ಮಂಗಳವಾರ ಹೌಸ್‌ ಆಫ್‌ ರಿಪ್ರೆಸೆಂಟಿಟಿವ್ಸ್‌ (ಪ್ರತಿನಿಧಿಗಳ ಸಭೆ) ಈ ಮಸೂದೆಯನ್ನು 79– 18 ಮತಗಳಿಂದ ಅಂಗೀಕರಿಸಿದೆ. ಮಸೂದೆಗೆ ಅಧ್ಯಕ್ಷ ಜೋ ಬೈಡನ್‌ ಸಹಿಗಾಗಿ ಶ್ವೇತಭವನಕ್ಕೆ ಕಳುಹಿಸಲಾಗುತ್ತದೆ. 

‘ಮಸೂದೆಗೆ ಶೀಘ್ರ ಸಹಿ ಮಾಡುತ್ತೇನೆ. ಈ ವಾರದಿಂದಲೇ ನಾವು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ತಲುಪಿಸಲು ಪ್ರಾರಂಭಿಸಬಹುದು’ ಎಂದು ಬೈಡನ್‌ ಹೇಳಿದ್ದಾರೆ. 

ADVERTISEMENT

ತುರ್ತು ಅಗತ್ಯವಿದೆ: ‘ಉಕ್ರೇನ್‌ ರಷ್ಯಾದಿಂದ ನಿರಂತರ ಬಾಂಬ್‌ ದಾಳಿಯನ್ನು ಎದುರಿಸುತ್ತಿದೆ. ಇರಾನ್‌ನಿಂದ ಹೆಚ್ಚಿನ ದಾಳಿ ಎದುರಿಸಿರುವ ಇಸ್ರೇಲ್‌, ಗಾಜಾ, ಸುಡಾನ್‌ ಮತ್ತು ಹೈಟಿ ಸೇರಿದಂತೆ ಪ್ರಪಂಚಾದ್ಯಂತ ಸಂಘರ್ಷ ಮತ್ತು ನೈಸರ್ಗಿಕ ವಿಕೋಪಗಳಿಂದ ತತ್ತರಿಸಿರುವವರಿಗೆ ಮತ್ತು ಹಿಂದೂ ಮಹಾಸಾಗರ– ಫೆಸಿಫಿಕ್‌ ಪ್ರದೇಶದಲ್ಲಿ ಭದ್ರತೆ ಮತ್ತ ಸ್ಥಿರತೆಯನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.  

ಅಂಗೀಕಾರಗೊಂಡಿರುವ ಮಸೂದೆಯು ಒಟ್ಟು ನಾಲ್ಕು ಭಾಗಗಳನ್ನು ಹೊಂದಿದ್ದು ಈ ಪೈಕಿ ಉಕ್ರೇನ್‌ಗೆ ₹5 ಲಕ್ಷ ಕೋಟಿ  ನೆರವು, ಇಸ್ರೇಲ್‌ ಮತ್ತು ಮಾನವೀಯ ಪರಿಹಾರಕ್ಕಾಗಿ ₹2.9 ಲಕ್ಷ ಕೋಟಿ, ತೈವಾನ್‌ ಮತ್ತು ಇತರ ಹಿಂದೂ ಮಹಾಸಾಗರ– ಫೆಸಿಫಿಕ್‌ ಪ್ರದೇಶದ ಮಿತ್ರರಾಷ್ಟ್ರಗಳು, ಟಿಕ್‌ಟಾಕ್‌ ಸಂಬಂಧಿತ ಹಾಗೂ ರಷ್ಯಾದ ಆಸ್ತಿಗಳ ಕುರಿತು ಇತರ ವ್ಯವಹಾರಗಳಿಗೆ ₹67 ಸಾವಿರ ಕೋಟಿ ಹಣವನ್ನು ನೀಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.