ADVERTISEMENT

ಅಮೆರಿಕ: ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ

ಪಿಟಿಐ
Published 3 ಮಾರ್ಚ್ 2026, 14:06 IST
Last Updated 3 ಮಾರ್ಚ್ 2026, 14:06 IST
<div class="paragraphs"><p> ಗುಂಡಿನ ದಾಳಿ (ಸಾಂದರ್ಭಿಕ&nbsp; ಚಿತ್ರ)</p></div>

ಗುಂಡಿನ ದಾಳಿ (ಸಾಂದರ್ಭಿಕ  ಚಿತ್ರ)

   

ಹ್ಯೂಸ್ಟನ್: ಅಮೆರಿಕದ ಆಸ್ಟಿನ್‌ನ ಬಾರ್‌ವೊಂದರ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ 21 ವರ್ಷದ ವಿದ್ಯಾರ್ಥಿನಿ ಸೇರಿದಂತೆ ಮೂವರು ಭಾನುವಾರ ಸಾವಿಗೀಡಾಗಿದ್ದಾರೆ. ಆರೋಪಿಯನ್ನೂ ಹತ್ಯೆ ಮಾಡಲಾಗಿದೆ. 

ಆಸ್ಟಿನ್‌ನಲ್ಲಿರುವ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಸವಿತಾ ಶಾನ್‌ ಮೃತರು. 

ADVERTISEMENT

ಜನನಿಬಿಡ ಪ್ರದೇಶದಲ್ಲಿ ಬಂದೂಕುಧಾರಿಯೊಬ್ಬ ಮಧ್ಯರಾತ್ರಿ 2 ಗಂಟೆಗೆ ಇದ್ದಕ್ಕಿದ್ದಂತೆ ಜನರತ್ತ ಗುಂಡು ಹಾರಿಸಿತೊಡಗಿದ. ಈ ವೇಳೆ 14 ಮಂದಿ ಗಾಯಗೊಂಡಿದ್ದಾರೆ. 

ಆರೋಪಿಯ ಮನೆಯಲ್ಲಿ ಶೋಧ ನಡೆಸಿದ ವೇಳೆ ಇರಾನ್‌ನ ಧ್ವಜ ಹಾಗೂ ಭಯೋತ್ಪಾದಕ ಬರಹಗಳು ಪತ್ತೆಯಾಗಿವೆ. ಅಮೆರಿಕ ಮತ್ತು ಇರಾನ್‌ ನಡುವೆ ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಈ ದಾಳಿ ನಡೆದಿದೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಶಂಕಿಸಿ ತನಿಖೆ ನಡೆಸಲಾಗುತ್ತಿದೆ. 

ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಮೂಲತಃ ಸೆನೆಗಲ್‌ನವನಾಗಿದ್ದು, ಅಮೆರಿಕದ ಪೌರತ್ವ ಪಡೆದಿದ್ದ ಎನ್‌ಡಿಯಾಗ ಡಿಯಾನೆ ಎಂದು ಗುರುತಿಸಲಾಗಿದೆ. ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಆತನೂ ಹತನಾಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.