ADVERTISEMENT

ನಾಲ್ಕನೇ ನಿಗೂಢ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

ಪಿಟಿಐ
Published 13 ಫೆಬ್ರುವರಿ 2023, 7:46 IST
Last Updated 13 ಫೆಬ್ರುವರಿ 2023, 7:46 IST
ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್   

ವಾಷಿಂಗ್ಟನ್: ಅಮೆರಿಕವು ತನ್ನ ವಾಯುಪ್ರದೇಶದಲ್ಲಿ ಕಂಡುಬಂದ ನಾಲ್ಕನೇ ನಿಗೂಢ ವಸ್ತುವನ್ನು ಭಾನುವಾರ ಹೊಡೆದುರುಳಿಸಿದೆ. ಶನಿವಾರ ಸಿಲಿಂಡರ್ ಆಕಾರದ ವಸ್ತುವನ್ನು ಕೆನಡಾ ವಾಯುನೆಲೆಯಲ್ಲಿ ಹೊಡೆದು ಉರುಳಿಸಲಾಗಿತ್ತು. ಇದೂ ಸಹ ಅದೇ ಮಾದರಿಯದ್ದಾಗಿದೆ ಎಂದು ವರದಿ ತಿಳಿಸಿದೆ.

ಮಿಚಿಗನ್ ರಾಜ್ಯದ ಹ್ಯುರಾನ್ ಸರೋವರದ ಮೇಲೆ ಅಮೆರಿಕ ವಾಯುಪ್ರದೇಶದಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಸ್ತುವನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಅಧ್ಯಕ್ಷ ಜೋ ಬೈಡನ್ ಅವರ ನಿರ್ದೇಶನದ ಮೇರೆಗೆ ಎಫ್-16 ಫೈಟರ್ ಜೆಟ್, AIM9x ಕ್ಷಿಪಣಿಯನ್ನು ಹಾರಿಸುವ ಮೂಲಕ ಈ ಕಾರ್ಯಾಚರಣೆ ನಡೆಸಿದೆ ಎಂದು ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ತಿಳಿಸಿದ್ದಾರೆ.

ಕಳೆದ ಶನಿವಾರ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಹೊಡೆದುರುಳಿಸಿದ ಚೀನಾದ ಕಣ್ಗಾವಲು ಬಲೂನ್ ಸೇರಿ ನಾಲ್ಕನೇ ವಸ್ತು ಇದಾಗಿದೆ. ಎರಡನ್ನು ಶುಕ್ರವಾರ ಅಲಾಸ್ಕಾದಲ್ಲಿ ಮತ್ತು ಶನಿವಾರ ಕೆನಡಾದ ವಾಯುಪ್ರದೇಶದಲ್ಲಿ ಒಂದನ್ನು ಫೈಟರ್‌ ಜೆಟ್‌ಗಳನ್ನು ಬಳಸಿ ಹೊಡೆದುರುಳಿಸಲಾಗಿತ್ತು.

ADVERTISEMENT

ಈ ವಸ್ತುವು ಚೀನಾದಿಂದ ಬಂದಿದೆ ಎಂದು ಅಮೆರಿಕ ಹೇಳಿದೆ. ಉಳಿದ ಮೂರು ವಸ್ತುಗಳ ಕುರಿತಾದ ಮೂಲವನ್ನು ಅಮೆರಿಕ ಮತ್ತು ಕೆನಡಾದ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ಆ ವಸ್ತುವಿನ ಅವಶೇಷಗಳು ಜನರ ಮೇಲೆ ಬೀಳದಂತೆ ಮತ್ತು ಅಧ್ಯಯನಕ್ಕೆ ಅವಶೇಷಗಳ ಸಂಗ್ರಹಣೆಗೆ ಸಾಧ್ಯವಾಗುವಂತೆ ಪ್ರದೇಶಕ್ಕೆ ಹೊಡೆದುರುಳಿಸಲಾಗಿದೆ. ಹಾಗಾಗಿ, ಯಾವುದೇ ನಾಗರಿಕರಿಗೆ ಗಾಯವಾದ ವರದಿ ಬಂದಿಲ್ಲ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.