ADVERTISEMENT

ಅಮೆರಿಕ: ಜಾರ್ಜಿಯಾದಲ್ಲಿ ಮರು ಮತಎಣಿಕೆಗೆ ನಿರ್ಧಾರ

ಪಿಟಿಐ
Published 12 ನವೆಂಬರ್ 2020, 13:00 IST
Last Updated 12 ನವೆಂಬರ್ 2020, 13:00 IST
ಬ್ರಾಡ್ ರಫೆನ್ಸ್‌ಪೆರ್ಗರ್
ಬ್ರಾಡ್ ರಫೆನ್ಸ್‌ಪೆರ್ಗರ್   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಗೆಲುವು ಸಾಧಿಸಿರುವ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್ ಅವರಿಗಿಂತ 14 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿರುವ ಕಾರಣ, ಜಾರ್ಜಿಯಾ ರಾಜ್ಯದಲ್ಲಿ ಮರು ಮತ ಎಣಿಕೆ ಮಾಡಲು ನಿರ್ಧರಿಸಲಾಗಿದೆ.

ಬೈಡನ್–ಟ್ರಂಪ್ ನಡುವೆ ಮುನ್ನಡೆಯ ಅಂತರ ಕಡಿಮೆ ಇದೆ. ಹಾಗಾಗಿ, ಜಾರ್ಜಿಯಾ ರಾಜ್ಯದ 150 ಕೌಂಟಿಗಳಲ್ಲಿ ಮರು ಮತ ಎಣಿಕೆ ನಡೆಯಲಿದೆ.

‘ಜಾರ್ಜಿಯಾದಲ್ಲಿ 16 ಎಲೆಕ್ಟ್ರೋಲ್ ಮತಗಳಿವೆ. ಇಲ್ಲಿ ಭಾರಿ ವಂಚನೆ ಮತ್ತು ಚುನಾವಣೆಯ ದುಷ್ಕೃತ್ಯ ನಡೆದಿದೆ’ ಎಂದು ಟ್ರಂಪ್ ಆರೋಪಿಸಿದ್ದರು. ಇದನ್ನು ಜಾರ್ಜಿಯಾದ ಅಧಿಕಾರಿಗಳು ನಿರಾಕರಿಸಿದ್ದರು.

ADVERTISEMENT

‘ಬೈಡನ್ ಈಗಾಗಲೇ 538 ಎಲೆಕ್ಟ್ರೋಲ್ ಮತಗಳ ಪೈಕಿ 279 ಮತಗಳನ್ನು ಗಳಿಸಿದ್ದಾರೆ. ಒಂದು ವೇಳೆ ಜಾರ್ಜಿಯಾದಲ್ಲಿ ಅವರಿಗೆ ಕಡಿಮೆ ಮತಗಳು ದೊರೆತರೂ ಅವರು ಅಧ್ಯಕ್ಷರಾಗಲು ಬೇಕಾಗುವಷ್ಟು ಮತಗಳಿಗೆ ಕೊರತೆ ಆಗುವುದಿಲ್ಲ’ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.