ADVERTISEMENT

ಸುಂಕ ಒಪ್ಪಂದ: 12 ಪತ್ರಗಳಿಗೆ ಸಹಿ ಹಾಕಿದ ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 5 ಜುಲೈ 2025, 13:49 IST
Last Updated 5 ಜುಲೈ 2025, 13:49 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ಮಾರಿಸ್‌ಟೌನ್‌ (ಅಮೆರಿಕ): ‘ಸುಂಕ ಒಪ್ಪಂದಕ್ಕೆ ಸಂಬಂಧಿಸಿದಂತೆ 12 ಪತ್ರಗಳಿಗೆ ಸಹಿ ಹಾಕಿದ್ದು, ಗಡುವಿನ ಅವಧಿಯು ಮುಗಿಯುತ್ತಿದ್ದಂತೆ ಜಾರಿಗೊಳ್ಳಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು.

‘ನಾನು ಸಹಿ ಹಾಕಿರುವ ಪತ್ರಗಳು ಬಹುಶಃ ಸೋಮವಾರ 12 ರಾಷ್ಟ್ರಗಳಿಗೆ ತಲುಪಬಹುದು. ಅದೇ ದಿನ ಆ ದೇಶಗಳ ಹೆಸರನ್ನು ಘೋಷಿಸಲಾಗುವುದು’ ಎಂದು ಏರ್‌ಪೋರ್ಸ್‌ ಒನ್‌ನಲ್ಲಿ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

ADVERTISEMENT

ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಪ್ರತಿಸುಂಕ ವಿಧಿಸುವುದಾಗಿ ಟ್ರಂಪ್‌ ಏಪ್ರಿಲ್‌ನಲ್ಲಿ ಘೋಷಿಸಿದ್ದರು. ಈ ನಿರ್ಧಾರವು ಜಾಗತಿಕ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.

ನಂತರದ ಬೆಳವಣಿಗೆಯಲ್ಲಿ ಜುಲೈ 9ರವರೆಗೂ ಪ್ರತಿಸುಂಕ ವಿಧಿಸುವುದಕ್ಕೆ ತಡೆಹಿಡಿದಿದ್ದ ಟ್ರಂಪ್‌, ಪ್ರಮುಖ ದೇಶಗಳೊಟ್ಟಿಗೆ ಸುಂಕ ಒಪ್ಪಂದಕ್ಕೆ ಮುಂದಾಗಿದ್ದರು.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕುಳಿತು ಕೆಲಸ ಮಾಡುವುದಕ್ಕಿಂತ ನೋಟಿಸ್‌ ಕಳಿಸುವುದು ತುಂಬಾ ಸುಲಭ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಈ ಅವಧಿಯಲ್ಲಿ ಬ್ರಿಟನ್‌, ವಿಯೆಟ್ನಾಂ ರಾಷ್ಟ್ರಗಳು ಅಮೆರಿಕದೊಂದಿಗೆ ಸುಂಕ ಒಪ್ಪಂದ ಮಾಡಿಕೊಂಡಿವೆ. ಅಮೆರಿಕ– ಚೀನಾ ನಡುವೆ ಪರಸ್ಪರ ಸುಂಕದ ಪ್ರಮಾಣ ತಗ್ಗಿಸುವ ಮಾತುಕತೆ, ಒಪ್ಪಂದವೂ ನಡೆದಿದೆ.

ಸುಂಕ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿದ್ದ ಗಡುವಿನ ಅವಧಿಯು ಸಮೀಪಿಸಿದ್ದರಿಂದ, ಇನ್ನೂ ಒಪ್ಪಂದ ಮಾಡಿಕೊಳ್ಳದ ದೇಶಗಳಿಗೆ ಸುಂಕದ ದರ ತಿಳಿಸಲು ಟ್ರಂಪ್‌ ಆಡಳಿತವು ಪತ್ರ ಕಳಿಸಿದೆ ಎನ್ನಲಾಗಿದೆ.

‘ಟ್ರಂಪ್‌ಗೆ ತಲೆಬಾಗಲಿರುವ ಮೋದಿ’

ನವದೆಹಲಿ: ಭಾರತ–ಅಮೆರಿಕ ನಡುವಿನ ಸುಂಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

‘ಅಮೆರಿಕ ನೀಡಿರುವ ಗಡುವಿನ ಅವಧಿಯೊಳಗೆ ಭಾರತ ಒಪ್ಪಂದ ಮಾಡಿಕೊಳ್ಳುವುದಿಲ್ಲ’ ಎಂದು ವಾಣಿಜ್ಯ ಸಚಿವ ಪೀಯೂಷ್‌ ಗೋಯೆಲ್‌ ಅವರು ಹೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಪೀಯೂಷ್‌ ಗೋಯೆಲ್‌ ಏನು ಬೇಕಾದರೂ ಹೇಳಿಕೊಳ್ಳಲಿ. ಆದರೆ ಈ ವಿಷಯದಲ್ಲಿ ನಾನು ಹೇಳುವ ಮಾತುಗಳನ್ನು ಪರಿಗಣಿಸಿ. ಸುಂಕಕ್ಕೆ ಸಂಬಂಧಿಸಿದಂತೆ ಟ್ರಂಪ್‌ ನೀಡಿರುವ ಗಡುವಿನ ಅವಧಿ ಸಮೀಪಿಸುತ್ತಿದ್ದಂತೆ ಮೋದಿ ಅವರು ವಿನಮ್ರರಾಗಿ ತಲೆಬಾಗುತ್ತಾರೆ’ ಎಂದು ರಾಹುಲ್‌ ಗಾಂಧಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.