ADVERTISEMENT

ವ್ಯಾಪಾರ ಮಾತುಕತೆಗೆ ಪಾಕ್ ಪ್ರತಿನಿಧಿಗಳು ಮುಂದಿನ ವಾರ ಅಮೆರಿಕಕ್ಕೆ: ಟ್ರಂ‍ಪ್

ರಾಯಿಟರ್ಸ್
Published 31 ಮೇ 2025, 2:49 IST
Last Updated 31 ಮೇ 2025, 2:49 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಸುಂಕ ಸಂಬಂಧ ಮಾತುಕತೆಗೆ ಪಾಕಿಸ್ತಾನದ ಪ್ರತಿನಿಧಿಗಳು ಮುಂದಿನ ವಾರ ಅಮೆರಿಕಕ್ಕೆ ಆಗಮಿಸುತ್ತಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ADVERTISEMENT

ಪಾಕಿಸ್ತಾನದ ಉತ್ಪನ್ನಗಳ ಮೇಲೆ ಟ್ರಂಪ್ ಆಡಳಿತ ಕಳೆದ ತಿಂಗಳು ಶೇ 29ರಷ್ಟು ಸುಂಕ ಹೇರಿತ್ತು.

ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಯುದ್ಧ ಮುಂದುವರಿಸಿದರೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ. ಅಣ್ವಸ್ತ್ರ ಹೊಂದಿರುವ ಉಭಯ ರಾಷ್ಟ್ರಗಳ ನಡುವೆ ಇತ್ತೀಚೆಗೆ ಸಂಘರ್ಷ ನಡೆದಿತ್ತು. ಫೈಟರ್ ಜೆಟ್, ಕ್ಷಿಪಣಿ, ಡ್ರೋನ್ ಹಾಗೂ ಫಿರಂಗಿ ದಾಳಿ ನಡೆಸಿದ್ದವು.

‘ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ತುಂಬಾ ಹತ್ತಿರದಲ್ಲಿದ್ದೇವೆ ಎನ್ನುವುದು ನಿಮಗೆ ತಿಳಿದಿದೆ’ ಎಂದು ಟ್ರಂಪ್ ಪತ್ರಕರ್ತರೊಂದಿಗೆ ಹೇಳಿದ್ದಾರೆ.

ಇತ್ತೀಚೆಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವ್ಯಾಪಾರ ಸಂಬಂಧ ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಭಾರತ ಹಾಗೂ ಅಮೆರಿಕ ಜುಲೈ ತಿಂಗಳ ಆದಿಯಲ್ಲಿ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.

ಭಾರತದ ಮೇಲೆ ಅಮೆರಿಕ ಶೇ 26ರಷ್ಟು ಸುಂಕ ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.