ADVERTISEMENT

ಅಮೆರಿಕ: ಕಡ್ಡಾಯ ಲಸಿಕೆ ನೀತಿ ಮುಂದಿನ ವಾರ ವಾಪಸ್‌

ಎಪಿ
Published 2 ಮೇ 2023, 15:34 IST
Last Updated 2 ಮೇ 2023, 15:34 IST
.
.   

ವಾಷಿಂಗ್ಟನ್‌: ಕಡ್ಡಾಯವಾಗಿ ಕೋವಿಡ್‌–19 ಲಸಿಕೆ ಪಡೆಯಬೇಕು ಎಂಬ ನೀತಿಯನ್ನು ಮುಂದಿನ ವಾರದಿಂದ ಕೈಬಿಡಲು ಅಮೆರಿಕ ಸರ್ಕಾರ ನಿರ್ಧರಿಸಿದೆ ಎಂದು ಶ್ವೇತಭವನ ತಿಳಿಸಿದೆ.

ಸರ್ಕಾರಿ ನೌಕರರು, ಗುತ್ತಿಗೆದಾರರು ಮತ್ತು ವಿದೇಶಿ ಪ್ರಯಾಣಿಕರಿಗೆ ಅನ್ವಯವಾಗುತ್ತಿದ್ದ ಕಡ್ಡಾಯ ಲಸಿಕೆ ನಿಯಮವು ಮೇ 11ಕ್ಕೆ ಕೊನೆಗೊಳ್ಳಲಿದೆ. ಈ ಮಧ್ಯೆ ಆರೋಗ್ಯ ಸಿಬ್ಬಂದಿ, ಗಡಿಯಲ್ಲಿರುವ ವಿದೇಶಿ ಪ್ರಜೆಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ನಿಲ್ಲಿಸಲು ಸರ್ಕಾರ ಆರಂಭಿಸಿದೆ ಎಂದು ಅದು ತಿಳಿಸಿದೆ.

ದೇಶದಲ್ಲಿ ಈವರೆಗೆ 27 ಕೋಟಿಗೂ ಹೆಚ್ಚು ಮಂದಿ ಅಥವಾ ಒಟ್ಟು ಜನಸಂಖ್ಯೆಯ ಶೇ 81ರಷ್ಟು ಮಂದಿ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.